ಮಾಲೂರು: ತಾಲೂಕು ಆಡಳಿತ ದಲಿತರಿಗೆ ಹಕ್ಕು ಪತ್ರ ನೀಡದೇ, ಚಿನ್ನ ದಾಸರಿ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂರ್ಘಷ ಸಮಿತಿ ತಾಲ್ಲೂಕು ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ಸಂಘಟನೆಯ ಸಂಚಾಲಕ ಎಸ್.ಎಂ.ವೆಂಕಟೇಶ್ ಮಾತನಾಡಿ, ಪಟ್ಟಣದ ಅರಳೇರಿ ರಸ್ತೆಯ ರಾಜ ಕಾಲುವೆ, ಸರ್ಕಾರಿ ಓಣಿ ಮತ್ತು ಗೋಮಾಳ ಜಮೀನನ್ನು ಸರ್ವೆ ಮಾಡಿಸಿ, ಅಕ್ರಮ ದಾಖಲೆಗಳನ್ನು ರದ್ದು ಮಾಡಿ, ಒತ್ತುವರಿ ತೆರುವಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ತಾಲ್ಲೂಕಿನ ಕಸಬ ಹೋಬಳಿ ನೀಲಕಂಠ ಆಗ್ರಹಾರ ಗ್ರಾಮದ ಗುಡಿಸಲು ವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡುವ ಮೂಲಕ ಮೂಲ ಸೌಕರ್ಯಗಳನ್ನು ಒದಗಿಸಬೇಕು. ತಾಲ್ಲೂಕಿನ ಕಸಬಾ ಹೋಬಳಿ ಲಿಂಗಾಪುರ ಗ್ರಾಮದ ಗೊಮಾಳ ಜಮೀನು ಮತ್ತು ಕೆರೆಯನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂರ್ಘಷ ಸಮಿತಿ ತಾಲ್ಲೂಕು ಸಂಚಾಲಕ ಡಿ.ಎನ್. ನಾರಾಯಣಸ್ವಾಮಿ, ವೆಂಕಟರಾಮ್, ತಿರುಮಲೇಶ್, ಅಂಗಶೆಟ್ಟಹಳ್ಳಿ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷ ಮುರಳಿ, ಅಮರೇಶ್, ಶಾಮಣ್ಣ, ಮಂಜುನಾಥ ನಾಯ್ಡು, ಸುರೇಶ್, ಬಾಬು, ನಾಗರಾಜ್ ಇನ್ನಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.