ADVERTISEMENT

ನಂಗಲಿ: ಆಲಿಕಲ್ಲು ಮಳೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 16:57 IST
Last Updated 8 ಏಪ್ರಿಲ್ 2020, 16:57 IST
ನಂಗಲಿಯಲ್ಲಿ ಮಳೆ ಸುರಿಯಿತು
ನಂಗಲಿಯಲ್ಲಿ ಮಳೆ ಸುರಿಯಿತು   

ನಂಗಲಿ: ನಂಗಲಿ ಭಾಗದ ಬಹುತೇಕ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಯಿತು. ಇದರಿಂದಾಗಿ ಸುಮಾರು ದಿನಗಳಿಂದ ಮಳೆ ಇಲ್ಲದೆ ಎದುರು ನೋಡುತ್ತಿದ್ದ ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿತು.

ಇಲ್ಲಿನ ಎನ್.ವಡ್ಡಹಳ್ಳಿ, ನಂಗಲಿ, ಹೆಬ್ಬಣಿ, ಬೈರಕೂರು, ರಾಜ್ಯದ ಗಡಿ ಪ್ರದೇಶಗಳಾದ ಬೈಯಪಲ್ಲಿ, ರಾಯಲ ಮಾನದಿನ್ನೆ, ಬಾಳಸಂದ್ರ, ಕಪ್ಪಲಮಡಗು, ಗುಡಿಪಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದೆ. ಜನ ಮತ್ತು ಜಾನುವಾರುಗಳ ಮೇವಿಗೆ ಸ್ವಲ್ಪಮಟ್ಟಿಗೆ ಅನುಕೂಲವಾದಂತಾಗಿದೆ.

ಆಲಿಕಲ್ಲು ಮಳೆಯಾಗಿದ್ದರಿಂದ ಯಾವುದೇ ಅನಾಹುತಗಳಾಗಲಿ ಅಥವಾ ಬೆಳೆಗಳ ನಷ್ಟವಾಗಲಿ ಸಂಭವಿಸಿಲ್ಲ. ಮಳೆಯಾದ ಖುಷಿಯಲ್ಲಿ ರೈತರು ತಮ್ಮ ಹೊಲಗಳನ್ನು ಉಳುಮೆ ಮಾಡಲು ಮಳೆ ಸಹಕಾರಿಯಾಯಿತು ಎಂದು ಸಂತಸಗೊಂಡರು.

ADVERTISEMENT

ಸಂಜೆ ಸುಮಾರು 4.45ಕ್ಕೆ ಪ್ರಾರಂಭವಾದ ಮಳೆಯು ಗಾಳಿ, ಗುಡುಗು ಸಿಡಿಲು ಇಲ್ಲದೆ ಪ್ರಶಾಂತವಾಗಿ ಹೊತ್ತು ಮುಳುಗಿದಾಗಲೂ ಸುರಿಯುತ್ತಲೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.