ADVERTISEMENT

‘ಸಕಾಲದಲ್ಲಿ ಸಾಲ ಮರುಪಾವತಿಸಿ’

ಡಿಸಿಸಿ ಬ್ಯಾಂಕ್‌ನಿಂದ 109 ರೈತರಿಗೆ ₹1.90 ಕೋಟಿ ಕೆಸಿಸಿ ಸಾಲ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 4:48 IST
Last Updated 11 ಅಕ್ಟೋಬರ್ 2020, 4:48 IST
ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ 109 ರೈತರಿಗೆ ಸಾಲ ವಿತರಿಸಲಾಯಿತು
ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ 109 ರೈತರಿಗೆ ಸಾಲ ವಿತರಿಸಲಾಯಿತು   

ಮುಳಬಾಗಲು: ಡಿಸಿಸಿ ಬ್ಯಾಂಕಿನಲ್ಲಿ ಪಡೆದುಕೊಳ್ಳುವ ಸಾಲ ಸೌಲಭ್ಯಗಳನ್ನು ರೈತರು ನಿಗದಿತ ಸಮಯದಲ್ಲಿಮರುಪಾವತಿ ಮಾಡುವ ಮೂಲಕ ಸಹಕಾರಿ ಬ್ಯಾಂಕುಗಳ ಉಳಿವು, ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ತಿಳಿಸಿದರು.

ತಾಲ್ಲೂಕಿನ ಮಲ್ಲನಾಯಕನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ 109 ರೈತರಿಗೆ ₹1.90 ಕೋಟಿ ಕೆಸಿಸಿ ಸಾಲ ವಿತರಿಸಿ ಮಾತನಾಡಿದರು.

ಡಿಸಿಸಿ ಬ್ಯಾಂಕ್ ಕೇವಲ ಮಹಿಳೆಯರಿಗಷ್ಟೆ ಅಲ್ಲದೆ ರೈತರ ಕೃಷಿ ಉದ್ದೇಶಗಳಿಗೂ ಸಾಲ ನೀಡುತ್ತಿದೆ. ಪಡೆದುಕೊಂಡ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಕಡೆಗೆ ರೈತರಿಗೆಬದ್ಧತೆ ಬೇಕು. ರೈತರು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ವ್ಯವಹರಿಸುವುದರ ಬದಲಿಗೆ ಸಹಕಾರಿ ಬ್ಯಾಂಕುಗಳಲ್ಲೆ ಖಾತೆ ತೆರೆದು ವ್ಯವಹರಿಸಬೇಕು ಎಂದು ತಿಳಿಸಿದರು.

ADVERTISEMENT

ಉದ್ದೇಶಿತ ಯೋಜನೆಗೆ ಸಾಲ ಉಪಯೋಗವಾಗಬೇಕು. ರೈತರು ಸಾಲ ಪಡೆದುಕೊಂಡು ಅದರಿಂದ ಆರ್ಥಿಕ ಅಭಿವೃದ್ಧಿ ಹೊಂದುವ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.

ಮಲ್ಲನಾಯಕನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅದ್ಯಕ್ಷ ಪಿ.ಎಸ್.ರಮೇಶ್ ಬಾಬು, ಗುಜ್ಜನಹಳ್ಳಿ ಮಂಜುನಾಥ್, ನಿರ್ದೇಶಕ ತಿಮ್ಮರಾಜು, ಸೀನಪ್ಪ, ಎಮ್ಮೇನತ್ತ ನಾಗರಾಜ ರೆಡ್ಡಿ, ಎಂ.ಶ್ರೀನಿವಾಸ್, ಗುರಪ್ಪ, ವಾಸುದೇವ್, ರಾಮಕೃಷ್ಣ, ಹರೀಶ್, ಸುಬ್ಬಣ್ಣ, ಹೇಮವತಿ, ರಾಮಣ್ಣ, ಕಾರ್ಯದರ್ಶಿ ಶ್ರೀನಾಥ್, ಮುಖಂಡ ಶೆಟ್ಟಿಕಲ್ ಅಮರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.