ADVERTISEMENT

ಪಠ್ಯಪುಸ್ತಕ ಒದಗಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 13:59 IST
Last Updated 28 ನವೆಂಬರ್ 2019, 13:59 IST
ಕೋಲಾರದ ಮೆಥೋಡಿಸ್ಟ್ ಶಾಲೆ ಸಭಾಂಗಣದಲ್ಲಿ ಗುರುವಾರ ನಡೆದ ಪ್ರೌಢಶಾಲಾ ವೃತ್ತಿಶಿಕ್ಷಕರ ಮಾಸಿಕ ಸಭೆಯಲ್ಲಿ ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ ಮಾತನಾಡಿದರು.
ಕೋಲಾರದ ಮೆಥೋಡಿಸ್ಟ್ ಶಾಲೆ ಸಭಾಂಗಣದಲ್ಲಿ ಗುರುವಾರ ನಡೆದ ಪ್ರೌಢಶಾಲಾ ವೃತ್ತಿಶಿಕ್ಷಕರ ಮಾಸಿಕ ಸಭೆಯಲ್ಲಿ ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ ಮಾತನಾಡಿದರು.   

ಕೋಲಾರ: ‘ವೃತ್ತಿ ಶಿಕ್ಷಣವು ಸಮಗ್ರ ಶಿಕ್ಷಣದ ಭಾಗವಾಗಿರುವುದರಿಂದ ಮಕ್ಕಳಿಗೆ ಬೋಧನೆಗೆ ಅನುಕೂಲವಾಗಲು ಕೂಡಲೇ ಪಠ್ಯಪುಸ್ತಕ ಮುದ್ರಿಸಿ ಶಿಕ್ಷಣ ಇಲಾಖೆ ಒದಗಿಸಬೇಕು’ ಎಂದು ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ ತಿಳಿಸಿದರು.

ನಗರದ ಮೆಥೋಡಿಸ್ಟ್ ಶಾಲೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವೃತ್ತಿ ಶಿಕ್ಷಕರ ಮಾಸಿಕ ಸಭೆ ಹಾಗೂ ವಿಷಯಾಧಾರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಮಕ್ಕಳ ಫಲಿತಾಂಶ ಉತ್ತಮಪಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದರು.

‘ಡಿ.೨ರಂದು ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ವೃತ್ತಿಶಿಕ್ಷಣ ವಿಷಯ ಪರಿವೀಕ್ಷಕರ ಸಭೆಯಲ್ಲಿ ಪಠ್ಯ ಪುಸ್ತಕ ಸಂಬಂಧ ಪ್ರಸ್ತಾಪಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ವೃತ್ತಿಶಿಕ್ಷಣ ಮಹಾತ್ಮಾಗಾಂಧೀಜಿಯರವ ಕನಸಿನ ಮೂಲ ಶಿಕ್ಷಣ. ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವುದು, ಸ್ವಚ್ಛತೆ, ಸಂಸ್ಕಾರ ಕಲಿಸುವ ಕಾರ್ಯವನ್ನು ವೃತ್ತಿಶಿಕ್ಷಕರು ನಿರ್ವಹಿಸುತ್ತಿದ್ದಾರೆ. ಬಿಸಿಯೂಟಕ್ಕೂ ನೆರವು ನೀಡುವ ವೃತ್ತಿಶಿಕ್ಷಕರಿಗೂ ಬೋಧನೆಗೆ ಅನುಕೂಲವಾಗುವಂತೆ ಪಠ್ಯಪುಸ್ತಕ ಒದಗಿಸಲು ಶಿಕ್ಷಣ ಇಲಾಖೆ ಕ್ರಮವಹಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲಾಮಟ್ಟದ ಪ್ರೌಢಶಾಲಾ ವೃತ್ತಿಶಿಕ್ಷಣ ವಸ್ತು ಪ್ರದರ್ಶನವನ್ನು ಡಿ.೧೮ ಮತ್ತು ೧೯ ರಂದು ಮೆಥೋಡಿಸ್ಟ್ ಶಾಲೆಯಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಸಲಾಗಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಾರ್ಕಂಡೇಶ್ವರ್, ಖಜಾಂಚಿ ಆಂಜನೇಯ, ಉಪಾಧ್ಯಕ್ಷೆ ಧನಲಕ್ಷ್ಮಿ, ಶಿಕ್ಷಕರಾದ ಮುರಳಿ, ಶ್ರೀರಾಮರೆಡ್ಡಿ, ಟಿ.ಎ.ಪ್ರಕಾಶ್‌ಬಾಬು, ತಿಪ್ಪೇಸ್ವಾಮಿ, ವೆಂಕಟೇಶಬಾಬು, ವೆಂಕಟಪತಿ, ಮೀನಾಕ್ಷಿ, ಚೌಡಮ್ಮ, ನಾರಾಯಣಸ್ವಾಮಿ, ನಾರಾಯಣಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.