ADVERTISEMENT

ಶ್ರೀನಿವಾಸಪುರ | ಮಂಡಿ ಮಾಲೀಕನ ಮೇಲೆ ಹಲ್ಲೆ; ₹ 15 ಲಕ್ಷ ದರೋಡೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:40 IST
Last Updated 26 ಆಗಸ್ಟ್ 2025, 5:40 IST
ಶ್ರೀನಿವಾಸಪುರ ಪಟ್ಟಣದ ಹೊರವಲಯದ ಕಾಲೊನಿ ಗೇಟ್ ಬಳಿ ಮಂಡಿ ಮಾಲೀಕನ ದರೋಡೆ ನಡೆದಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ. ಪರಿಶೀಲಿಸಿದರು
ಶ್ರೀನಿವಾಸಪುರ ಪಟ್ಟಣದ ಹೊರವಲಯದ ಕಾಲೊನಿ ಗೇಟ್ ಬಳಿ ಮಂಡಿ ಮಾಲೀಕನ ದರೋಡೆ ನಡೆದಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ. ಪರಿಶೀಲಿಸಿದರು   

ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಕಾಲೊನಿ ಗೇಟ್ ಬಳಿ ದರೋಡೆಕೋರರು ಕಾರಿನ ಗಾಜು ಒಡೆದು ತರಕಾರಿ ಮಂಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ₹ 15 ಲಕ್ಷ ದೋಚಿ ಪರಾರಿಯಾಗಿದ್ದಾರೆ.

ತರಕಾರಿ ಮಂಡಿ ಮಾಲೀಕ ವ್ಯಕ್ತಿ ಲಿಂಗರಾಜು ಹಲ್ಲೆಗೊಳಗಾದ ಹಾಗೂ ಹಣ ಕಳೆದುಕೊಂಡ ವ್ಯಕ್ತಿ. ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದ್ದ ವೇಳೆ ಈ ಘಟನೆ ನಡೆದಿದೆ. ದರೋಡೆಕೋರರು ತನ್ನ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ADVERTISEMENT

ಲಿಂಗರಾಜು ಕಲ್ಲೂರು ಗ್ರಾಮದ ಬಳಿ ಇರುವ ಎಲ್‌ಎಸ್‌ಎಂ ವೆಜಿಟೇಬಲ್ಸ್ ಮಾರ್ಕೆಟ್‌ ನಡೆಸುತ್ತಿದ್ದಾರೆ. ರೈತರಿಗೆ ಹಣ ನೀಡಲು ಸ್ವಗ್ರಾಮ ವಕ್ಕಲೇರಿ ಸಮೀಪದ ಮಾರ್ಕಂಡಪುರದಿಂದ ಹಣ ತರುತ್ತಿದ್ದರು ಎಂಬುದು ಗೊತ್ತಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಗದೀಶ್, ಡಿವೈಎಸ್ಪಿ ಮನಿಷಾ, ಶ್ರೀನಿವಾಸಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದ ದಾ‌ಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.