ಬಂಗಾರಪೇಟೆ: ಭಾರತೀಯ ವಾಯುಪಡೆಯ ಆಪರೇಷನ್ ಸಿಂಧೂರ ಕಾರ್ಯಚರಣೆ ಯನ್ನು ಸ್ವಾಗತಿಸುತ್ತೇನೆ. ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಹೇಡಿತನದ ಕೃತ್ಯಕ್ಕೆ ಆಪರೇಶನ್ ಸಿಂಧೂರ ಉತ್ತಮ ಪ್ರತ್ಯುತ್ತರವಾಗಿದೆ.ಪಾಕಿಸ್ತಾನ ಮೇಲಿನ ದಾಳಿ ನೇತೃತ್ವ ವಹಿಸಿದ್ದು ಕರ್ನಲ್ ಸೊಫಿಯಾ ಖುರೇಶಿ ಎಂಬ ಮುಸ್ಲಿಂ ಮಹಿಳೆ ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು
ತಾಲ್ಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು
ಭಾರತದ ದೇಶವು ಜಾತ್ಯತೀತ ರಾಷ್ಟ್ರವಾಗಿದ್ದು ಎಲ್ಲಾ ಧರ್ಮದವರು ಸಹೋದರರಂತೆ ವಾಸಿಸುವಂತಹ ರಾಷ್ಟ್ರವಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆಯನ್ನು ನೀಡುವುದೇ ನನ್ನ ಮುಖ್ಯ ಧ್ಯೇಯವಾಗಿದೆ ಮತ್ತು ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಹಾಗೂ ಪ್ರತಿಯೊಂದು ಇಲಾಖೆಯಿಂದ ಜನಸಾಮಾನ್ಯರಿಗೆ ದೊರೆಯುವಂತಹ ಸೌಲಭ್ಯಗಳನ್ನು ಒಳಗೊಂಡಿರುವ ಮಾಹಿತಿಯನ್ನು ಲಿಖಿತವಾಗಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳೆಯರಿಗೆ ಮತ್ತು ರೈತರಿಗೆ ಮೂರು ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಇದನ್ನು ಸದ್ಬಳಕೆಯನ್ನು ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆಯನ್ನು ನೀಡಿದರು.
ಗ್ರಾಮಗಳ ಪರಿಮಿತಿಯಲ್ಲಿ ಸಿಸಿ ರಸ್ತೆಗಳ ನಿರ್ಮಾಣ, ಕಾಮಸಮುದ್ರ ಮುಖ್ಯ ರಸ್ತೆಯಿಂದ ತಾವರೆಕೆರೆ ಮಾರ್ಗವಾಗಿ ಕೆಜಿಎಫ್ ಮುಖ್ಯ ರಸ್ತೆಯ ವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಭರವಸೆಯನ್ನು ನೀಡಿದರು
ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷೆ ಮಾಡಿದಷ್ಟು ಫಲಿತಾಂಶ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು ಆದರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಥಾನವನ್ನು ಪಡೆದಿದ್ದಾರೆ ಸಂತಸವನ್ನು ವ್ಯಕ್ತಪಡಿಸಿದರು.
ಕಾರ್ಯ ನಿರ್ವಹಣಾಧಿಕಾರಿ ರವಿ ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರಿನ ಘಟಕಗಳು,ಸಿ ಸಿ ರಸ್ತೆಗಳ ನಿರ್ಮಾಣ, ರಾಜು ಕಾಲುವೆಗಳ ನಿರ್ಮಾಣ, ಕೆರೆ ಗೋಕೊಂಟೆಗಳ ನಿರ್ಮಾಣ, ಚರಂಡಿಗಳ ಸ್ವಚ್ಚತೆ ಮತ್ತು ನೈರ್ಮಲ್ಯ, ಬೀದಿ ದೀಪಗಳ ಅಳವಡಿಕೆ ಗುರುತಿಸಿ ಅವುಗಳಿಗೆ ಕಲ್ಪಿಸಲು ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಡೀಕರಣದ ಅನುದಾನ ಹಾಗೂ ಐದಿನೈದನೆಯ ಹಣಕಾಸು ಆಯೋಗದ ಅನುದಾನ, ನರೇಗಾ ಯೋಜನೆಯಲ್ಲಿ ಕೈಗೊಳ್ಳ ಬೇಕಾದ ಕಾಮಗಾರಿಯನ್ನು ಪಟ್ಟಿ ಮಾಡಿ ಕ್ರಿಯಾ ಯೋಜನೆಯನ್ನು ರೂಪಿಸಿ ಗ್ರಾಮ ಸಭೆಯಲ್ಲಿ ಅನುಮೋದನೆಯನ್ನು ಪಡೆಯುವ ಉದ್ದೇಶದಿಂದ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ.
ಸಭೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ, ಬಿಇಓ ಗುರುಮೂರ್ತಿ,ಸಹಾಯಕ ನಿರ್ದೇಶಕರಾದ , ಪ್ರತಿಭಾ, ಅಂಜಲಿ ದೇವಿ,ಆರ್ ಎಫ್ ಓ ಶ್ರೀ ಲಕ್ಷ್ಮೀ, ಶ್ರೀನಿವಾಸ್, ಸಿಡಿಪಿಓ ಮುನಿರಾಜು,ಟಿ ಹೆಚ್ ಓ ಡಾ ಸುನಿಲ್ ಕುಮಾರ್, ಇಂಜಿನಿಯರ್ ರವಿ ಕುಮಾರ್, ರವಿಚಂದ್ರ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಶ್ವಂತ್, ಕೃಷಿ ಅಧಿಕಾರಿ ವಿಜಯ್ ಕುಮಾರ್ ,ಉಪಾಧ್ಯಕ್ಷೆ ರಾಧಮ್ಮ, ಗ್ರಾ ಪಂ ಸದಸ್ಯರಾದ ಶಶಿಧರ್ ರೆಡ್ಡಿ,ಮಂಜುನಾಥ, ನಟರಾಜ್ ಸುಮಿತ್ರಮ್ಮ, ಆಶಾಲತ,ಎಸ್ ರವಿ,ಅರುಣಮ್ಮ,ಎಸ್ ರೇಣುಕಾ, ಧನಲಕ್ಷ್ಮಿ, ರೇಣುಕಾ ,ಹಂಸಗಿರಿ,ಸಂದಿಪ್ ಗೌಡ ಮತ್ತು ಗ್ರಾ ಪಂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.