ADVERTISEMENT

ನಾವು ಅಲೆಮಾರಿಗಳು ಇನ್ನೂ ಭಿಕ್ಷೆ ಬೇಡಬೇಕೇ?: ಶಾಸಕ ಕೊತ್ತೂರು ಮಂಜುನಾಥ್

ನನಗೆ ಮಂತ್ರಿ ಸ್ಥಾನ ಬೇಕೇಬೇಕು: ಶಾಸಕ ಕೊತ್ತೂರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:58 IST
Last Updated 6 ಜುಲೈ 2025, 6:58 IST
ಕೋಮುಲ್‌ ಮುಖ್ಯ ಕಚೇರಿ ಆವರಣದಲ್ಲಿ ಕೆ.ವೈ.ನಂಜೇಗೌಡ ಬೆಂಬಲಿಗರ ಸಂಭ್ರಮ
ಕೋಮುಲ್‌ ಮುಖ್ಯ ಕಚೇರಿ ಆವರಣದಲ್ಲಿ ಕೆ.ವೈ.ನಂಜೇಗೌಡ ಬೆಂಬಲಿಗರ ಸಂಭ್ರಮ   

ಕೋಲಾರ: ‘ಇಡೀ ದೇಶದಲ್ಲಿ ಅಲೆಮಾರಿ ಸಮಾಜದಿಂದ ಇರುವ ಏಕೈಕ ಶಾಸಕ ನಾನು. ಹೀಗಾಗಿ, ನನಗೆ ಮಂತ್ರಿ ಸ್ಥಾನ ಕೊಡಲೇಬೇಕು’ ಎಂದು ಕೋಲಾರ ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್ ಒತ್ತಾಯಿಸಿದರು.

ಕೋಮುಲ್‌ ಕಚೇರಿಯಲ್ಲಿ ಶನಿವಾರ ಒಕ್ಕೂಟದ ಚುನಾವಣಾ ಪ್ರಕ್ರಿಯೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಎರಡನೇ ಬಾರಿ ಶಾಸಕನಾಗಿರುವ ನಾನು ಸಹ ಮಂತ್ರಿ ಸ್ಥಾನದ ಆಕಾಂಕ್ಷಿ. ಅಲೆಮಾರಿ ಸಮುದಾಯದಲ್ಲಿ ಜನಿಸಿ ಶಾಸಕ ಆಗಿದ್ದೇನೆ. ಎಲ್ಲೆಡೆ ನನ್ನ ಸಮುದಾಯಕ್ಕೆ ಅನ್ಯಾಯ ಆಗಿದೆ. ನಾವು ಇನ್ನೂ ಶಾಸ್ತ್ರ ಹೇಳಿಕೊಂಡು, ಭಿಕ್ಷೆ ಬೇಡಿಕೊಂಡೇ ಇರಬೇಕೇ’ ಎಂದು ಪ್ರಶ್ನಿಸಿದರು.

‘ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೆಜಿಎಫ್ ಶಾಸಕಿ ರೂಪಕಲಾ ಅವರಿಗೆ ರಾಜ್ಯ ಸರ್ಕಾರದಲ್ಲಿ ಸಂಪುಟ ಸ್ಥಾನಮಾನ ದೊರೆತಿದೆ. ನಂಜೇಗೌಡರು ಈಗಷ್ಟೆ ಕೋಮುಲ್ ಅಧ್ಯಕ್ಷರಾಗಿದ್ದಾರೆ. ಈ ಸರ್ಕಾರದಲ್ಲಿದ್ದೂ ಏನೂ ಇಲ್ಲದೆ ಇರುವ ಜಿಲ್ಲೆಯ ಏಕೈಕ ಶಾಸಕ ನಾನೊಬ್ಬನೇ’ ಎಂದು ಬೇಸರ ಹೊರಹಾಕಿದರು.

ADVERTISEMENT

ಚುನಾವಣಾ ಪ್ರಕ್ರಿಯೆಗೆ ಕೋಮುಲ್ ನಿರ್ದೇಶಕ, ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಗೈರು ಕುರಿತು, ‘ಅವರನ್ನು ತಾವೇ ಫೋನ್ ಮೂಲಕ ಕೇಳಿ. ಗೈರು ಆಗಿರುವವರು ರೈತರ ಪರವಾಗಿಲ್ಲ ಎನ್ನುವುದು ಇದರ ಅರ್ಥ’ ಎಂದು ತಿರುಗೇಟು ನೀಡಿದರು.

ಅಧ್ಯಕ್ಷರಾಗಿ ಕೆ.ವೈ.ನಂಜೇಗೌಡ ಅವರ ಅವಿರೋಧ ಆಯ್ಕೆ ಖಚಿತವಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.