ADVERTISEMENT

ಬನ್ನೇರುಘಟ್ಟಕ್ಕೆ ಸಿಂಗಪುರದ ಕೆಂಪುಮೂತಿ ಬಬೂನ್‌ಗಳು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 22:41 IST
Last Updated 29 ಮಾರ್ಚ್ 2024, 22:41 IST
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸಿಂಗಾಪುರ್ ಝೂಲಾಜಿಕಲ್ ಗಾರ್ಡನ್‌ನಿಂದ ಪ್ರಾಣಿ ವಿನಿಮಯ ಯೋಜನೆಯಡಿ ತರಲಾದ ಹಮಾದ್ರಿಯಾಸಸ್ ಬಬೂನ್ಸ್‌ಗಳು
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸಿಂಗಾಪುರ್ ಝೂಲಾಜಿಕಲ್ ಗಾರ್ಡನ್‌ನಿಂದ ಪ್ರಾಣಿ ವಿನಿಮಯ ಯೋಜನೆಯಡಿ ತರಲಾದ ಹಮಾದ್ರಿಯಾಸಸ್ ಬಬೂನ್ಸ್‌ಗಳು   

ಆನೇಕಲ್ : ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಸಿಂಗಪುರದ ಪ್ರಾಣಿ ಸಂಗ್ರಹಾಲಯದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಎರಡು ಗಂಡು ಮತ್ತು ನಾಲ್ಕು ಹೆಣ್ಣು ಹಮಾದ್ರಿಯಾಸ್‌ ಬಬೂನ್‌ (ಕೆಂಪುಮೂತಿಯ ಮಂಗ) ತರಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದರು.

ಹೊರ ದೇಶದಿಂದ ತಂದ ಪ್ರಾಣಿಗಳನ್ನು ಸ್ಥಳಾಂತರಿಸುವ ಮೊದಲು ಒಂದು ತಿಂಗಳ ಕಾಲ ಕ್ವಾರೆಂಟೈನ್‌ ಮಾಡಬೇಕೆಂಬ ಮಾರ್ಗಸೂಚಿಯಿದ್ದು ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಾಣಿಗಳನ್ನು ಕ್ವಾರೆಂಟೈನ್ ಪ್ರದೇಶದಲ್ಲಿ ಬಿಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT