ADVERTISEMENT

ಸಮಾಜ ವಿಜ್ಞಾನ ಪರೀಕ್ಷೆ: 480 ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 15:37 IST
Last Updated 6 ಏಪ್ರಿಲ್ 2022, 15:37 IST
ಕೋಲಾರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಸಜ್ಜಾಗಿ ಕುಳಿತಿದ್ದರು
ಕೋಲಾರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಸಜ್ಜಾಗಿ ಕುಳಿತಿದ್ದರು   

ಕೋಲಾರ: ಜಿಲ್ಲೆಯ 84 ಕೇಂದ್ರಗಳಲ್ಲಿ ಬುಧವಾರ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆಯು ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆದಿದ್ದು, 480 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು.

ಜಿಲ್ಲೆಯಲ್ಲಿ ಹೊಸ ಅಭ್ಯರ್ಥಿಗಳು 19,936 ಮಂದಿ ಹಾಗೂ ಖಾಸಗಿ, ಪುನರಾವರ್ತಿತ ಅಭ್ಯರ್ಥಿಗಳು 1,015 ಮಂದಿ ಸೇರಿದಂತೆ ಒಟ್ಟಾರೆ 20,951 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ 20,471 ಮಂದಿ ಪರೀಕ್ಷೆ ಬರೆದರು.

19,621 ಮಂದಿ ಹೊಸ ಶಾಲಾ ಅಭ್ಯರ್ಥಿಗಳು ಹಾಗೂ 850 ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. 315 ಮಂದಿ ಹೊಸ ಅಭ್ಯರ್ಥಿಗಳು ಮತ್ತು 165 ಮಂದಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ಬರಲಿಲ್ಲ.

ADVERTISEMENT

ಬಂಗಾರಪೇಟೆ ತಾಲ್ಲೂಕಿನ 13 ಕೇಂದ್ರಗಳಲ್ಲಿ 3,400 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದರು. ಈ ಪೈಕಿ ಅಂತಿಮವಾಗಿ 79 ಮಂದಿ ಗೈರಾಗಿದರು. ಕೆಜಿಎಫ್ ತಾಲ್ಲೂಕಿನಲ್ಲಿ ಹೆಸರು ನೋಂದಾಯಿಸಿದ್ದ 2,598 ವಿದ್ಯಾರ್ಥಿಗಳಲ್ಲಿ 81 ಮಂದಿ ಪರೀಕ್ಷೆಗೆ ಬರಲಿಲ್ಲ.

ಕೋಲಾರ ತಾಲ್ಲೂಕಿನಲ್ಲಿ 5,999 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದು, ಇವರಲ್ಲಿ 192 ಮಂದಿ ಗೈರಾದರು. ಮಾಲೂರು ತಾಲ್ಲೂಕಿನಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 3,119 ವಿದ್ಯಾರ್ಥಿಗಳಲ್ಲಿ 67 ಮಂದಿ ಬರಲಿಲ್ಲ. ಮುಳಬಾಗಿಲು ತಾಲ್ಲೂಕಿನಲ್ಲಿ ಹೆಸರು ನೋಂದಾಯಿಸಿದ್ದ 3,053 ವಿದ್ಯಾರ್ಥಿಗಳಲ್ಲಿ 45 ಮಂದಿ ಪರೀಕ್ಷೆಗೆ ಬರಲಿಲ್ಲ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ 2,782 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಇವರಲ್ಲಿ 16 ಮಂದಿ ಗೈರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.