ADVERTISEMENT

ಮಾಲೂರು: ಸೋಮಶೇಖರ ರೆಡ್ಡಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 11:27 IST
Last Updated 6 ಜನವರಿ 2020, 11:27 IST
ಮಾಲೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಬಳ್ಳಾರಿ ಶಾಸಕ ಜೆ.ಸೋಮಶೇಖರ್ ರೆಡ್ಡಿ ಅವರ ಮೇಲೆ ದೂರು ದಾಖಲಿಸಿದ ಪ್ರತಿಯನ್ನು ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರದರ್ಶಿಸಿದರು
ಮಾಲೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಬಳ್ಳಾರಿ ಶಾಸಕ ಜೆ.ಸೋಮಶೇಖರ್ ರೆಡ್ಡಿ ಅವರ ಮೇಲೆ ದೂರು ದಾಖಲಿಸಿದ ಪ್ರತಿಯನ್ನು ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರದರ್ಶಿಸಿದರು   

ಮಾಲೂರು: ಶಾಸಕ ಜೆ.ಸೋಮಶೇಖರ್ ರೆಡ್ಡಿ ಅವರ ಮೇಲೆ ಪಟ್ಟಣದ ಪೊಲೀಸರು ಎಫ್‌ಐಆರ್‌ ದಾಖಲಿಸ
ಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಮಾತನಾಡಿ, ಇತ್ತೀಚೆಗೆ ಬಳ್ಳಾರಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಗಳ ಪರವಾಗಿ ಮೆರವಣಿಗೆ ಹಾಗೂ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ಥಳೀಯ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ ಕಾಯ್ದೆ ವಿರುದ್ದವಾಗಿ ಹೋರಾಟ ಮಾಡಿದಂತಹ ಪಕ್ಷಗಳ ಮುಖಂಡರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಶೇ 80 ರಷ್ಟು ಇರುವ ಹಿಂದುಗಳು ಬೀದಿಗೆ ಬಂದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಅಲ್ಪಸಂಖ್ಯಾತರ ವಿರುದ್ದ ಪರೋಕ್ಷವಾಗಿ ದ್ವೇಷ ಭಾವನೆ ಬೆಳೆಯುವಂತೆ ಮಾಡಿದ್ದಾರೆ ಎಂದು ಕಿಡಿ
ಕಾರಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮದುಸೂದನ್, ಮುಖಂಡರಾದ ಸಿ.ಲಕ್ಷ್ಮಿನಾರಾಯಣ್, ವಿಜಯ
ನರಸಿಂಹ, ಅಶ್ವಥ್ ರೆಡ್ಡಿ, ಶಬ್ಬೀರ್, ಮಂಜುನಾಥ್, ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.