
ಪ್ರಜಾವಾಣಿ ವಾರ್ತೆ
ಶ್ರೀನಿವಾಸಪುರ: ತಾಲ್ಲೂಕಿನ ಹೆಬ್ಬಟ ಗ್ರಾಮ ತಾಜ್ ಪಾಷಾ ಎಂಬುವರ ಮನೆಯಲ್ಲಿ ಈಚೆಗೆ ಕಳ್ಳತನವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಪರಿಶೀಲನೆ ನಡೆಸಿದರು.
ಯಾವುದೇ ಕಾರಣಕ್ಕೂ ಹಣವನ್ನು ಮನೆಯಲ್ಲಿ ಇಡಬೇಡಿ, ಸಾಧ್ಯವಾದಷ್ಟು ಬ್ಯಾಂಕ್‍ನಲ್ಲಿ ಇಡಿ ಎಂದು ಸಲಹೆ ನೀಡಿದರು.
ಯಾರ ಮೇಲಾದರೂ ಅನುಮಾನ ಬಂದರೆ 112 ಸಂಖ್ಯೆಗೆ ಕರೆ ಮಾಡಿ. ಮೊಬೈಕ್ ಮೂಲಕ ಹೆಚ್ಚು ಅಪರಾಧಗಳು ನಡೆಯುತ್ತಿವೆ. ಎಚ್ಚರಿಕೆಯಿಂದ ಇರಬೇಕು ಎಂದರು.
ಮನೆಯಲ್ಲಿದ್ದ ₹ 4 ಲಕ್ಷರ, ಜೇಬಿನಲ್ಲಿ ಇದ್ದ ₹ 5 ಸಾವಿರ, 4 ಉಂಗುರ ಕಳ್ಳತನವಾಗಿದೆ ಎಂದು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್‍ಪಿ ಮನಿಷಾ, ಪಿಎಸ್‍ಐ ಜಯರಾಮ್, ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.