ADVERTISEMENT

ಶ್ರೀನಿವಾಸಪುರ: ಶಿಕ್ಷಕಿ ವರ್ಗಾವಣೆ ತಡೆಗೆ ಗ್ರಾಮಸ್ಥರು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 6:08 IST
Last Updated 18 ಆಗಸ್ಟ್ 2025, 6:08 IST
ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಗ್ರಾಮದ ಸರ್ಕಾರಿ ಶಾಲೆಯ ವರಲಕ್ಷ್ಮಿ ಎಂಬ ಶಿಕ್ಷಕಿಯ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು
ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಗ್ರಾಮದ ಸರ್ಕಾರಿ ಶಾಲೆಯ ವರಲಕ್ಷ್ಮಿ ಎಂಬ ಶಿಕ್ಷಕಿಯ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು   

ಶ್ರೀನಿವಾಸಪುರ: ತಾಲ್ಲೂಕಿನ ಕಶೆಟ್ಟಿಪಲ್ಲಿ ಗ್ರಾಮದ ಸರ್ಕಾರಿ ಶಾಲೆಯ ವರಲಕ್ಷ್ಮಿ ಎಂಬ ಶಿಕ್ಷಕಿಯ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಗ್ರಾಮಸ್ಥರು ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಯ ಪಾಲಕ ರಾಮಚಂದ್ರಾರೆಡ್ಡಿ ಮಾತನಾಡಿ, ‘ಗ್ರಾಮದಲ್ಲಿನ ಶಾಲೆಯಲ್ಲಿ ವರಲಕ್ಷ್ಮಿ ಮೇಡಂ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಶಾಲೆಯಲ್ಲಿ ಹಿಂದೆ ಕೇವಲ 15 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅಂದಿನಿಂದ ಶೈಕ್ಷಣಿಕ ಪ್ರಗತಿಗೆ ಕಂಕಣ ಬದ್ಧರಾಗಿ ಇಂದು ಶಾಲೆಯಲ್ಲಿ 150 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಕಾರಣರಾಗಿದ್ದಾರೆ. ಇಂತಹ ಶಿಕ್ಷಕಿಯನ್ನು ಹೆಚ್ಚುವರಿ ಪಟ್ಟಿಯಲ್ಲಿ ಸೂಚಿಸಿ, ವರ್ಗಾವಣೆ ಮಾಡಿರುವ ಶಿಕ್ಷಣ ಇಲಾಖೆಯ ಕ್ರಮ ಸರಿ ಅಲ್ಲ’ ಎಂದರು.

‘ವರಲಕ್ಷ್ಮಿ ಎಲ್ಲಾ ವಿದ್ಯಾರ್ಥಿಗಳು ಅಚ್ಚುಮೆಚ್ಚು. ಈಗ ಬಂದಿರುವವರನ್ನು ಬೇರೆಡೆ ವರ್ಗಾವಣೆ ಮಾಡಿ ವರಲಕ್ಷ್ಮಿ ಅವರನ್ನೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಎಸ್‍ಡಿಎಂಸಿ ಅಧ್ಯಕ್ಷ ನವೀನ್, ಉಪಾಧ್ಯಕ್ಷೆ ಸುಮಿತ್ರಮ್ಮ, ಗ್ರಾಮಸ್ಥರಾದ ಚೈತ್ರ, ಕೆ.ಎನ್.ನವೀನ್‍ಕುಮಾರ್, ಶ್ರೀನಾಥ್, ಎಂ.ಚೌಡರೆಡ್ಡಿ, ಕೆ.ಮಂಜುನಾಥ್, ಸುರೇಶ್‍ಕುಮಾರ್ ಕೆ.ಎಸ್, ಕೆ.ಎನ್.ರೆಡ್ಡಪ್ಪ, ವಿ.ಪ್ರಕಾಶ್, ಮುನಿಶಾಮಿತಲಾರಿ, ನರಸಿಂಹಪ್ಪ, ಸಾಕಮ್ಮ, ಮುನಿರತ್ನಮ್ಮ, ಸುಮಿತ್ರ, ವೆಂಕಟಲಕ್ಷ್ಮಮ್ಮ, ಲಕ್ಷ್ಮಿದೇವಮ್ಮ, ಕೆ.ಎಂ.ವೆಂಕಟರಮಣಪ್ಪ, ನಾರಾಯಣ ಸ್ವಾಮಿ, ಕೆ.ವಿ.ರೆಡಪ್ಪ, ಭಾಸ್ಕರ್ , ಶಿವಣ್ಣ, ಕೆ.ವಿ.ರವಣಾ, ಶ್ರೀನಿವಾಸಪ್ಪ, ಸಂತೋಷ ಕೆ.ಎನ್, ಮುರಳಿ ಕೆ.ಎನ್, ಇಂದಿರಾ.ಸಿ, ಎ.ವನಿತಾ, ಈಶ್ವರ್, ಶ್ರೀರಾಮಪ್ಪ, ಶಶಿಕಳಾ, ನೇತ್ರಾವತಿ, ವಿನುತಾ, ಗೌರಮ್ಮ, ಉಮಾದೇವಿ, ರತ್ನಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.