ADVERTISEMENT

ದೇವರೆ ನನ್ನನ್ನು ಡಾಕ್ಟರ್ ಮಾಡು; ಚಿಕ್ಕತಿರುಪತಿ ದೇಗುಲ ಹುಂಡಿಯಲ್ಲಿ ಸಿಕ್ಕ ಪತ್ರ

ಚಿಕ್ಕತಿರುಪತಿ ವೆಂಕಟರಮಣ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 6:25 IST
Last Updated 23 ಜುಲೈ 2025, 6:25 IST
<div class="paragraphs"><p>ಹುಂಡಿಯಲ್ಲಿ ಪತ್ತೆಯಾದ ಹರಕೆಯ ಪತ್ರ</p></div>

ಹುಂಡಿಯಲ್ಲಿ ಪತ್ತೆಯಾದ ಹರಕೆಯ ಪತ್ರ

   

ಮಾಲೂರು: ತಾಲ್ಲೂಕಿನ ಚಿಕ್ಕತಿರುಪತಿ ವೆಂಕಟರಮಣ ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೆ ಹುಂಡಿ ಎಣಿಕೆ ನಡೆಯಿತು.

ನಾಲ್ಕು ತಿಂಗಳಿನಲ್ಲಿ ಅನ್ನ ದಾಸೋಹ ಹುಂಡಿಗಳಲ್ಲಿ ₹37 ಲಕ್ಷಕ್ಕೂ ಹೆಚ್ಚು ನಗದು, 18 ಗ್ರಾಂ ಬಂಗಾರ, 50 ಗ್ರಾಂ ಬೆಳ್ಳಿ ಹಾಗೂ ವಿದೇಶಿ ನೋಟುಗಳು ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಮಣಿ ಹೇಳಿದರು.

ADVERTISEMENT

ಎಣಿಕೆ ಕಾರ್ಯದಲ್ಲಿ ತಾಲ್ಲೂಕಿನ ಲಕ್ಕೂರು, ಟೇಕಲ್ ಹಾಗೂ ಮಾಸ್ತಿ ಹೋಬಳಿಯ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿ ಮತ್ತು ಸ್ವಯಂ ಸೇವಕರಾಗಿ ಭ್ರಮರಾಂಭ ಸೇವಾ ಸಮಿತಿಯ 50 ಮಂದಿ ಭಾಗವಹಿಸಿದ್ದರು.

‘ನನ್ನನ್ನು ವೈದ್ಯ ಮಾಡು’: ಚಿಕ್ಕ ತಿರುಪತಿ ವೆಂಕಟರಮಣ ದೇವಾಲಯದಲ್ಲಿ ವಿಶೇಷವಾದ ಹರಕೆಯ ಪತ್ರವೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಹರಕೆಯ ಪತ್ರದಲ್ಲಿ ಭಕ್ತನೊಬ್ಬ, ‘ನಾನು ವೈದ್ಯನಾಗಬೇಕು. ನಾನು ನನ್ನ ಕಾಲೇಜು ಮುಗಿಸಿದ್ದೇನೆ. ದಯವಿಟ್ಟು ಎಂಬಿಬಿಎಸ್ ಸೀಟು ನೀಡಿ, ನನ್ನನ್ನು ವೈದ್ಯನನ್ನಾಗಿ ಮಾಡು ದೇವರೇ, ನಾನು ನನ್ನ ಗುರಿಗಳತ್ತ ಗಮನಹರಿಸುತ್ತೇನೆ’ ಎಂದು ಬರೆದಿದ್ದಾರೆ. 

ಮುಜರಾಯಿ ತಹಶೀಲ್ದಾರ್ ಶ್ರೀನಿವಾಸ್ ರೆಡ್ಡಿ, ಲಕ್ಕೂರು ಹೋಬಳಿ ಉಪ ತಹಶೀಲ್ದಾರ್ ಕೆ. ಎಸ್. ಚೇತನ್, ಟೇಕಲ್ ಹೋಬಳಿ ಉಪ ತಹಶೀಲ್ದಾರ್ ಮಮತಾ, ಲಕ್ಕೂರು ಹೋಬಳಿ ರಾಜಸ್ವ ನಿರೀಕ್ಷಕ ಶ್ರೀಪತಿ ಹಾಗೂ ಲಕ್ಕೂರು, ಮಾಸ್ತಿ, ಟೇಕಲ್ ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಮತ್ತು ಕೆನರಾ ಬ್ಯಾಂಕ್ ಸಿಬ್ಬಂದಿ, ಚಿಕ್ಕತಿರುಪತಿ ಗ್ರಾಮ ಆಡಳಿತ ಅಧಿಕಾರಿ ರೂಪೇಂದ್ರ ಎನ್ ಹಾಗೂ ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿ, ದೇವಾಲಯದ ಸಿಬ್ಬಂದಿ ವೆಂಕಟೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿದೇಶಿ ನೋಟುಗಳು

ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ವೆಂಕಟರಮಣ ದೇವಾಲಯನದಲ್ಲಿ ಮಂಗಳವಾರ ಹುಂಡಿ ಎಣಿಕೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.