ಬೇತಮಂಗಲ: ಕಂಗಾಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜರಾಗಂಗಾಪುರ-ಐವಾರಹಳ್ಳಿ ಗ್ರಾಮದ ಬಳಿ ನೂತನವಾಗಿ ನಿರ್ಮಿಸಿ ಪ್ರತಿಷ್ಠಾಪನೆ ಮಾಡಿರುವ 108 ಅಡಿಗಳ ಎತ್ತರದ ಬೇತಾಳ ಮಹಾಶಕ್ತಿ ಪೀಠ ದೇಗುಲದಲ್ಲಿ ಶುಕ್ರವಾರ ಪೂಜಾ ಕಾರ್ಯಗಳು ನಡೆದವು.
ದೇವಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಅಭಿಷೇಕ, ಮಹಾಮಂಗಳಾರತಿ ಹಾಗೂ ಅನ್ನದಾನ ನಡೆಯಿತು. ನೂರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ದೇವಾಲಯದಲ್ಲಿ ಪ್ರತಿ ಶುಕ್ರವಾರ ಹಾಗೂ ಅಮಾವಾಸ್ಯೆಯಂದು ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ.
ಬೇತಾಳ ಮಹಾಶಕ್ತಿ ಪೀಠ ದೇಗುಲದ ಆವರಣದಲ್ಲಿ ಭದ್ರಕಾಳಿ, ಕಾಲಭೈರವ, ಕಾಟೇರಮ್ಮ, ಪಾರ್ವತಿ, ನಾಗಮ್ಮ, ವಿಷ್ಣುಮೂಯ ಸೇರಿದಂತೆ ಹಲವು ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.