ADVERTISEMENT

ಹಾಲು ಕರೆಯುವ ಯಂತ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 15:17 IST
Last Updated 11 ನವೆಂಬರ್ 2020, 15:17 IST
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರ ತಾಲ್ಲೂಕಿನ ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ಸಮೂಹ ಹಾಲು ಕರೆಯುವ ಯಂತ್ರ ಉದ್ಘಾಟಿಸಿದರು.
ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಕೋಲಾರ ತಾಲ್ಲೂಕಿನ ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ಸಮೂಹ ಹಾಲು ಕರೆಯುವ ಯಂತ್ರ ಉದ್ಘಾಟಿಸಿದರು.   

ಕೋಲಾರ: ತಾಲ್ಲೂಕಿನ ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಮೂಹ ಹಾಲು ಕರೆಯುವ ಯಂತ್ರಗಳನ್ನು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಬುಧವಾರ ಉದ್ಘಾಟಿಸಿದರು.

‘ಹುಲ್ಲಂಕಲ್ಲು ಸಂಘಕ್ಕೆ ಒಕ್ಕೂಟದಿಂದ ಸುಮಾರು ₹ 3.50 ಲಕ್ಷ ಅನುದಾನ ನೀಡಲಾಗಿದೆ. ಹಾಲು ಉತ್ಪಾದಕರು ಹಾಲು ಒಕ್ಕೂಟದ ಸದುಪಯೋಗ ಪಡೆಯಬೇಕು’ ಎಂದು ಹರೀಶ್‌ ಸಲಹೆ ನೀಡಿದರು.

‘ಸಮೂಹ ಹಾಲು ಕರೆಯುವ ಯಂತ್ರಗಳಲ್ಲಿ ಹಾಲು ಕರೆಯುವುದರಿಂದ ಒಕ್ಕೂಟದಿಂದ ಸಂಘಕ್ಕೆ ಲೀಟರ್‌ಗೆ 30 ಪೈಸೆ ಹೆಚ್ಚಿಗೆ ನೀಡಲಾಗುವುದು. ಇದರಲ್ಲಿ 10 ಪೈಸೆ ಹಾಲು ಉತ್ಪಾದಕರಿಗೆ ನೀಡಬೇಕು ಮತ್ತು 20 ಪೈಸೆಯನ್ನು ಸಂಘದ ನಿರ್ವಹಣೆಗೆ ಬಳಸಬೇಕು’ ಎಂದು ಸೂಚಿಸಿದರು.

ADVERTISEMENT

‘ಸಮೂಹ ಹಾಲು ಕರೆಯುವ ವ್ಯವಸ್ಥೆಯಿಂದ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ. ಮಹಿಳೆಯರಿಗೆ ಹಾಲು ಕರೆಯುವ ಬವಣೆಯಿಂದ ಮುಕ್ತಿ ಸಿಗುತ್ತದೆ. ಸಂಘದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದರೆ ವೈಯಕ್ತಿಕವಾಗಿ ಧನಸಹಾಯ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಕೋಚಿಮುಲ್‌ ತಾಲ್ಲೂಕು ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಹುಲ್ಲಂಕಲ್ಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಚ್ಚಪ್ಪ, ಗ್ರಾಮದ ಮುಖಂಡ ಈರಪ್ಪ, ಶಿಬಿರ ಅಧಿಕಾರಿಗಳಾದ ರಾಜಬಾಬು, ಸಮೀರ್‌ಪಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.