
ಕೋಲಾರ: ಅಧಿಕಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ನಕಲಿ ಎಸಿಬಿ ಅಧಿಕಾರಿಗಳನ್ನು ಕೋಲಾರ ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬೆಳಗಾವಿಯ ಮುರಿಗಪ್ಪ, ಹಾಸನ ಜಿಲ್ಲೆ ಸಕಲೇಶಪುರದ ರಜನಿಕಾಂತ್ ಹಾಗೂ ಮಹಾರಾಷ್ಟ್ರದ ರಾಜೇಶ್ ಬಂಧಿತ ಆರೋಪಿಗಳು. ಇವರನ್ನು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡ ಈ ಮೂವರು ಕೋಲಾರದ ನಿರ್ಮಿತಿ ಕೇಂದ್ರದ ಯೋಜನಾ ಅಧಿಕಾರಿ ನಾರಾಯಣಗೌಡ ಅವರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅನುಮಾನಗೊಂಡ ನಾರಾಯಣಗೌಡ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ಮೂವರು ಆರೋಪಿಗಳ ವಿರುದ್ಧ ಇಂಥದ್ದೇ ಹಲವು ಪ್ರಕರಣಗಳುವಿವಿಧೆಡೆ ದಾಖಲಾಗಿವೆ.
'ನಮ್ಮನ್ನೇಕೆ ಆತಂಕವಾದಿಗಳಂತೆ ಕಾಣುತ್ತಿದ್ದೀರಿ? ಭ್ರಷ್ಟಾಚಾರ ಮಾಡಿದವರನ್ನು ಸುಮ್ಮನೇ ಬಿಟ್ಟಿದ್ದೀರಿ. ಅವರು ದೇಶ ಹಾಳು ಮಾಡುತ್ತಿದ್ದಾರೆ. ಭ್ರಷ್ಟಾಚಾರ ಬಯಲಿಗೆಳೆವುದು ನಮ್ಮ ಉದ್ದೇಶವಾಗಿತ್ತು' ಎಂದು ಆರೋಪಿಗಳು ಪೊಲೀಸರೊಂದಿಗೆ ವಾಗ್ವಾದದಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.