ADVERTISEMENT

ಕೋಲಾರ: ಟೊಮೆಟೊ ಬೆಲೆ ಕುಸಿತ

15 ಕೆ.ಜಿ ಟೊಮೆಟೊ ಬಾಕ್ಸ್‌ ದರ ಸರಾಸರಿ ₹1,100

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 16:10 IST
Last Updated 9 ಆಗಸ್ಟ್ 2023, 16:10 IST
ಕೋಲಾರ ಎಪಿಎಂಸಿ ಹರಾಜಿನಲ್ಲಿದ್ದ ಟೊಮೆಟೊ 
ಕೋಲಾರ ಎಪಿಎಂಸಿ ಹರಾಜಿನಲ್ಲಿದ್ದ ಟೊಮೆಟೊ    

ಕೋಲಾರ: ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ನಾಟಿ ಮಾಡಿದ್ದ ಟೊಮೆಟೊ ಫಸಲು ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿರುವ ಕಾರಣ ಆವಕ ಹೆಚ್ಚಾಗಿದ್ದು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಟೊಮೆಟೊ ದರ ನಿಧಾನವಾಗಿ ಇಳಿಕೆಯಾಗುತ್ತಿದೆ.

ಜುಲೈ 31 ರಂದು ಗರಿಷ್ಠ ₹ 2,700ಕ್ಕೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್‌ ಸರಾಸರಿ ದರ ಬುಧವಾರದ ಹರಾಜಿನಲ್ಲಿ ₹1,100 ಇತ್ತು. ರೈತರಿಗೆ ಕೆ.ಜಿಗೆ ಸರಾಸರಿ ₹73 ದರ ಲಭಿಸಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಹೆಚ್ಚುಕಡಿಮೆ ಇದೇ ದರದಲ್ಲಿ ಟೊಮೆಟೊ ದೊರೆಯುತ್ತಿದೆ.

15 ಕೆ.ಜಿ.ಟೊಮೊಟೊ ಬಾಕ್ಸ್‌ ಗರಿಷ್ಠ ₹1,340 ಮತ್ತು ಕನಿಷ್ಠ ₹300ಕ್ಕೆ ಮಾರಾಟವಾಗಿದೆ. ಹತ್ತು ದಿನಗಳ ಅಂತರದಲ್ಲಿ ಬಾಕ್ಸ್‌ಗೆ ₹ 1,300ಕ್ಕೂ ಹೆಚ್ಚು ಇಳಿಕೆ ಆದಂತಾಗಿದೆ.

ADVERTISEMENT

ಬುಧವಾರ ಕೋಲಾರ ಎಪಿಎಂಸಿಯಲ್ಲಿ 86,091 ಕ್ವಿಂಟಲ್‌ ಅಂದರೆ 12,913 ಬಾಕ್ಸ್‌ ಟೊಮೆಟೊ ಆವಕವಾಗಿದೆ. ಹತ್ತು ದಿನಗಳ ಅಂತರದಲ್ಲಿ ಸುಮಾರು 33 ಸಾವಿರ ಕ್ವಿಂಟಲ್ ಆವಕ ಹೆಚ್ಚಿದೆ‌. ಜುಲೈ 31 ರಂದು ಕೇವಲ 52,820 ಕ್ವಿಂಟಲ್‌ ಆವಕವಾಗಿತ್ತು. ಹೀಗಾಗಿ  ಬೇಡಿಕೆ ತಗ್ಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಬೆಲೆ ಹೆಚ್ಚಾದ ನಂತರ ಜಿಲ್ಲೆಯಲ್ಲಿ ಈಚೆಗೆ ಸುಮಾರು ಆರು ಸಾವಿರ ಹೆಕ್ಟೇರ್‌ನಲ್ಲಿ ಹೊಸದಾಗಿ ಟೊಮೆಟೊ ನಾಟಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.