ADVERTISEMENT

25 ಲಕ್ಷ ಗಿಡ ನಾಟಿ ಗುರಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:07 IST
Last Updated 6 ಜೂನ್ 2020, 9:07 IST
ಬೇತಮಂಗಲ ಹಳೆ ಬಡಾವಣೆಯ ವಿಜೇಂದ್ರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಶಾಸಕಿ ಎಂ.ರೂಪಕಲಾ ಗಿಡ ನಾಟಿ ಮಾಡಿದರು
ಬೇತಮಂಗಲ ಹಳೆ ಬಡಾವಣೆಯ ವಿಜೇಂದ್ರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಶಾಸಕಿ ಎಂ.ರೂಪಕಲಾ ಗಿಡ ನಾಟಿ ಮಾಡಿದರು   

ಬೇತಮಂಗಲ: ಗ್ರಾಮ ಪಂಚಾಯಿತಿಗಳಲ್ಲಿ 1.5 ಲಕ್ಷ ಗಿಡ ನಾಟಿ ಮಾಡಲು ಆಯಾ ಗ್ರಾ.ಪಂಗೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ಗ್ರಾಮದ ವಿಜಯೇಂದ್ರ ಸ್ವಾಮಿ ದೇಗುಲ ಬಳಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನಾಟಿ ಚಾಲನೆ ನೀಡಿ ಮಾತನಾಡಿದರು. ಪರಿಸರದಲ್ಲಿ ಉತ್ತಮ ವಾತಾವರಣ ಸೃಷ್ಟಿಗೆ ಪ್ರತಿಯೊಬ್ಬರು ಗಿಡಗಳನ್ನು ನಾಟಿ ಮಾಡಿ ಪೋಷಣೆ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಯವರು ಉತ್ತಮ ಗಾಳಿ, ಮಳೆ, ಸಮೃದ್ಧಿಯ ಪರಿಸರ ಪಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಪರಿಸರ ದಿನಕ್ಕೆ ಸೀಮಿತ ಬೇಡ: ಕ್ಷೇತ್ರದಲ್ಲಿ ನಾಟಿ ಮಾಡುತ್ತಿರುವ ಗಿಡಗಳು ಕೇವಲ ಪರಿಸರ ದಿನಕ್ಕೆ ಸೀಮಿತವಾಗದೆ, ಗಿಡಗಳನ್ನು ಪೋಷಣೆ ಮಾಡುವ ಜಾವಾಬ್ದಾರಿಯನ್ನು ಸಹ ಗ್ರಾಪಂ ಅಧಿಕಾರಿಗಳು ನಿರ್ವಹಿಸಬೇಕೆಂದು ಸೂಚಿಸಿದರು ಇದಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದರು.

ADVERTISEMENT

ನಂತರ ಬೇತಮಂಗಲದ ಮುಸ್ಲಿಂ ಸ್ಮಶಾನದಲ್ಲಿ 100ಕ್ಕೂ ಅಧಿಕ ಗಿಡಗಳನ್ನು ನಾಟಿ ಮಾಡಿದರು. ಪ್ರತಿಯೊಬ್ಬರಿಂದ ಸ್ವಚ್ಛಮೇವ ಜಯತೆ ಪ್ರತಿಜ್ಞಾ ವಿಧಿ ಬೊಧಿಸಿದರು.

ಇಒ ರವೀಂದ್ರ, ಜಿ.ಪಂ ಸದಸ್ಯೆ ನಿರ್ಮಲ ಅಮರೇಶ್, ಜಿ.ಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ನಾರಾಯಣಸ್ವಾಮಿ, ಪಿಡಿಒ ಬೇತಮಂಗಲ ಭಾಸ್ಕರ್, ಟಿ.ಗೊಲ್ಲಹಳ್ಳಿ ಶ್ರೀನಿವಾಸ್ ಮೂರ್ತಿ, ಮಾರಿಕುಪ್ಪ ಯಶ್ವಂತ್, ವೆಂಗಸಂದ್ರ ವೈಶಾಲಿ, ಗ್ರಾ.ಪಂ ಕಾರ್ಯದರ್ಶಿ ವೆಂಕಟೇಶ್, ಮುಖಂಡ ನಲ್ಲೂರು ಶಂಕರ್, ದುರ್ಗಾ ಪ್ರಸಾದ್, ಸುರೇಂದ್ರ ಗೌಡ, ಮಂಜುನಾಥ್, ಒಬಿಸಿ ಮುನಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.