ADVERTISEMENT

ಸಪ್ತಪದಿ ತುಳಿದ ಎರಡು ಜೋಡಿ

​ಪ್ರಜಾವಾಣಿ ವಾರ್ತೆ
Published 12 ಮೇ 2022, 4:59 IST
Last Updated 12 ಮೇ 2022, 4:59 IST
ಬೇತಮಂಗಲ ಸಮೀಪದ ಬಂಗಾರು ತಿರುಪತಿ ದೇವಾಲಯದಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ನವ ಜೋಡಿಗೆ ತಹಶೀಲ್ದಾರ್‌ ಸುಜಾತಾ ಆರ್ಥಿಕ ನೆರವಿನ ಚೆಕ್ ವಿತರಿಸಿದರು
ಬೇತಮಂಗಲ ಸಮೀಪದ ಬಂಗಾರು ತಿರುಪತಿ ದೇವಾಲಯದಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ನವ ಜೋಡಿಗೆ ತಹಶೀಲ್ದಾರ್‌ ಸುಜಾತಾ ಆರ್ಥಿಕ ನೆರವಿನ ಚೆಕ್ ವಿತರಿಸಿದರು   

ಬೇತಮಂಗಲ: ಧಾರ್ಮಿಕ ದತ್ತಿ ಇಲಾಖೆ ಹಾಗೂ ಮುಜರಾಯಿ ಇಲಾಖೆಯಸಪ್ತಪದಿ ಯೋಜನೆಯಡಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಎರಡು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರಸಿದ್ಧ ಬಂಗಾರು ತಿರುಪತಿ ದೇವಾಲಯದ ಅವರಣದಲ್ಲಿ ಬುಧವಾರ ಹಿಂದೂ ಸಂಪ್ರದಾಯದಂತೆ ಕೋಲಾರ ತಾಲ್ಲೂಕಿನ ಶ್ರೀಕಾಂತ್ ಹಾಗೂ ಚೈತ್ರಾ, ಬಂಗಾರಪೇಟೆ ತಾಲ್ಲೂಕಿನ ಹರೀಶ್ ಕುಮಾರ್ ಹಾಗೂ ನಂದಿನಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಜರಾಯಿ ಇಲಾಖೆಯ ಮಾರ್ಗಸೂಚಿಯಂತೆ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿವಾಹ ನಡೆಸಿಕೊಟ್ಟರು.

ಕೆಜಿಎಫ್ ತಹಶೀಲ್ದಾರ್ ಸುಜಾತಾ ಸ್ಥಳಕ್ಕೆ ಭೇಟಿ ನೀಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳಿಗೆ ಶುಭ ಹಾರೈಸಿ, ದೇವಾಲಯದಿಂದ ವಧು ಹಾಗೂ ವರರಿಗೆ ನೀಡುವ ನೆರವಿನ ಚೆಕ್ ವಿತರಿಸಿದರು.

ADVERTISEMENT

ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಸುಬ್ರಮಣಿ, ಪೇಷ್ಕರ್ ಸುರೇಶ್, ವಿಶ್ವ ಹಿಂದೂ ಪರಿಷತ್‌ನ ಸಿಂಧ್ಯಾ ಜೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.