
ಕೋಲಾರ: ಈಚೆಗೆ ಹೊಸ ವರ್ಷದ ಮೋಜು ಮಸ್ತಿಯಲ್ಲಿ ಅವಘಡಕ್ಕೆ ಸಿಲುಕಿ ಯುವಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಕೂಲಿ ಮಾಡಿ ಸಾಕಿರುತ್ತಾರೆ, ವಿದ್ಯಾಭ್ಯಾಸ ಕೊಡಿಸಿರುತ್ತಾರೆ. ಅವರ ನಂಬಿಕೆ ಸುಳ್ಳು ಮಾಡಬೇಡಿ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಕಿವಿಮಾತು ಹೇಳಿದರು.
ತಾಲ್ಲೂಕಿನ ವೇಮಗಲ್ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರು ನಿಧನರಾಗಿದ್ದರಿಂದ ಕುಟುಂಬಕ್ಕೆ ಸಾಂತ್ವನ ಹೇಳಲು ಅವರು ಭೇಟಿ ನೀಡಿದ್ದರು.
ಯುವಕರು ವಿದ್ಯಾವಂತರಾಗಬೇಕು, ಆಟ ಪಾಠಗಳಲ್ಲಿ ಉತ್ತಮ ಸಾಧನೆ ಮಾಡಬೇಕು. ರಾಜಕಾರಣಕ್ಕೆ ಬಂದು ಬೆಳೆಯಬೇಕು ಎಂದರು.
ನನಗೆ ರಾಜಕೀಯವಾಗಿ ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಹೆಸರು ತಂದುಕೊಟ್ಟ ಕೋಲಾರ ಜಿಲ್ಲೆಯನ್ನು ಹಾಗೂ ಜನರನ್ನು ಯಾವತ್ತೂ ಮರೆಯಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸೀತಿ ಹೊಸೂರು ಮುರಳಿ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಪಕ್ಷದ ಮುಖಂಡರಾಗಲಿ ಅಥವಾ ಯಾವುದೇ ಜಾತಿಯ ಮುಖಂಡರಾಗಲಿ ಮುನಿಯಪ್ಪ ಅವರ ಬಳಿ ತಮ್ಮ ಕಷ್ಟ ಹೇಳಿಕೊಂಡರೆ ತಕ್ಷಣ ಸ್ಪಂದಿಸುತ್ತಾರೆ. ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕ ಅಧ್ಯಕ್ಷ ಕೆ.ಜಯದೇವ್, ಮುಖಂಡರಾದ ಎಚ್.ವೆಂಕಟೇಶಪ್ಪ, ಡಿ.ವಿ.ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.