ADVERTISEMENT

ಕೊಪ್ಪಳ: ಎಪಿಎಂಸಿ ಅಧ್ಯಕ್ಷರಾಗಿ ವೆಂಕನಗೌಡ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 10:08 IST
Last Updated 27 ಮಾರ್ಚ್ 2018, 10:08 IST
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 2ನೇ ಅವಧಿಯ ಅಧ್ಯಕ್ಷರಾಗಿ ಬೆಟಗೇರಿ ಕ್ಷೇತ್ರದ ವೆಂಕನಗೌಡ ಹಿರೇಗೌಡರ ಅವಿರೋಧವಾಗಿ ಆಯ್ಕೆಯಾದರು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 2ನೇ ಅವಧಿಯ ಅಧ್ಯಕ್ಷರಾಗಿ ಬೆಟಗೇರಿ ಕ್ಷೇತ್ರದ ವೆಂಕನಗೌಡ ಹಿರೇಗೌಡರ ಅವಿರೋಧವಾಗಿ ಆಯ್ಕೆಯಾದರು   

ಕೊಪ್ಪಳ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 2ನೇ ಅವಧಿಗೆ ಅಧ್ಯಕ್ಷರಾಗಿ ಬೆಟಗೇರಿ ಕ್ಷೇತ್ರದ ವೆಂಕನಗೌಡ ಹಿರೇಗೌಡರ ಅವರು ಅವಿರೋಧ ಆಯ್ಕೆಯಾದರು.

ಅಧಿಕಾರ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, 'ಈಗಾಗಲೇ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜಿಲ್ಲಾಡಳಿತ ಭವನದ ಹತ್ತಿರ 34 ಎಕರೆ ಭೂಮಿ ಖರೀದಿಸಲಾಗಿದೆ. ಕೊಪ್ಪಳದಲ್ಲಿ ಸುಸಜ್ಜಿತ ಕೃಷಿ ಮಾರುಕಟ್ಟೆ ನಿರ್ಮಾಣ, ರೈತಭವನ ಹಾಗೂ ವರ್ತಕರಿಗೆ ಹಾಗೂ ಮಧ್ಯವರ್ತಿಗಳಿಗೆ ಹೆಚ್ಚು ಸೌಲಭ್ಯ ಕಲ್ಪಿಸಲಾಗುವುದು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರ ಹಾಗೂ ವ್ಯಾಪಾರಿಗಳಲ್ಲಿ ಸಮನ್ವಯ ಸಾಧಿಸಲಾಗುವುದು. ಈ ಮೂಲಕ ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನಾಗಿ ನಿರ್ಮಾಣ ಮಾಡಲಾಗುತ್ತದೆ' ಎಂದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರ ಅಧ್ಯಕ್ಷ ಜುಲ್ಲು ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾ‍ದ ಸುರೇಶ ಭೂಮರಡ್ಡಿ, ಕಾಟನ್‍ಪಾಷಾ, ಮುಖಂಡರಾದ ಶಾಂತಣ್ಣ ಮುದಗಲ್, ಎಚ್.ಎಲ್.ಹಿರೇಗೌಡರ, ಹನುಮರೆಡ್ಡಿ ಹಂಗನಕಟ್ಟಿ, ಜಡಿಯಪ್ಪ ಬಂಗಾಳಿ, ಚೌಡಪ್ಪ ಜಂತ್ಲಿ, ಜಾಫರತಟ್ಟಿ, ಗವಿಸಿದ್ದಪ್ಪ ಮುದಗಲ್, ನವೋದಯ ವಿರುಪಣ್ಣ, ಬಸವರೆಡ್ಡೆಪ್ಪ ಹಳ್ಳಿಕೇರಿ, ಕೃಷ್ಣ ಇಟ್ಟಂಗಿ, ವಿಶ್ವನಾಥ ರಾಜು, ಚುನಾವಣಾ ಅಧಿಕಾರಿ ಗುರುಬಸವರಾಜ, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.