ADVERTISEMENT

ಪೂರ್ಣ ಪ್ರಮಾಣದ ಶಿಕ್ಷಣ ಕೊಡಿಸಿರಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 7:45 IST
Last Updated 15 ಮಾರ್ಚ್ 2011, 7:45 IST

ಕುಕನೂರು: ಭವಿಷ್ಯದಲ್ಲಿ ಉತ್ತಮ ಪ್ರಜೆಯನ್ನಾಗಿಸಲು ಮಕ್ಕಳಿಗೆ ಪೂರ್ಣ ಪ್ರಮಾಣದ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಶಿಕ್ಷಣ ಪ್ರೇಮಿ ಹಾಲಪ್ಪ ಆಚಾರ್ ಕರೆ ನೀಡಿದರು.ಇಲ್ಲಿಯ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ  ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸರ್ಕಾರ ಯೋಜನೆಯನ್ನು ರೂಪಿಸಿದ ಫಲವಾಗಿ ರಾಜ್ಯಾದ್ಯಂತ ವಿವಿಧ ತೆರನಾದ ವಸತಿ ಶಾಲೆಗಳು ನಡೆಯುತ್ತವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉಚಿತ ಊಟ, ವಸತಿ ಸೇರಿದಂತೆ ಸುಸಜ್ಜಿತವಾದ ಕಟ್ಟಡಗಳ ಪೂರೈಕೆಗಾಗಿ ಪ್ರತಿಯೊಂದು ವಸತಿ ನಿಲಯಕ್ಕೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿವೆ. ಸರ್ಕಾರದ ಕನಸು ನನಸಾಗಿಸಲು ಎಲ್ಲಾ ಹಂತದ ಜನಪ್ರತಿನಿಧಿಗಳು ಶಿಕ್ಷಣ ಕ್ಷೇತ್ರದ ಏಳ್ಗೆಗೆ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿ.ಸಿ.ಎಂ. ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಎಚ್. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಈರಪ್ಪ ಕುಡಗುಂಟಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ ನಾಗಲಾಪುರಮಠ, ಶಿಕ್ಷಕ ಅಬ್ದುಲ್‌ರಹಿಮಾನಸಾಬ ದಿದಗಿ, ರಸೀದ ಹಣಜಗೇರಿ, ರಸೀದ ಮುಬಾರಕ್ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶೇಖರಪ್ಪ ವಾರದ, ರೇಣುಕಾ ಬೆದವಟ್ಟಿ, ವಿಸ್ತರ್ಣಾಧಿಕಾರಿ ಪರಮೇಶ್ವರಪ್ಪ, ಪಿ.ಎಸ್.ಐ ಸೋಮಶೇಖರ್ ಜುಟ್ಟಲ್, ವಿಠ್ಠಪ್ಪ ಕರಡಕಲ್, ಶಂಭು ಜೋಳದ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರಬಸಯ್ಯ ಬಿನ್ನಾಳ, ಸದಸ್ಯರಾದ ಪ್ರಕಾಶ ಬೋರಣ್ಣವರ, ನೂರಅಹ್ಮದ ಹಣಜಗೇರಿ, ಬೆಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಮೂಲಿಮನಿ, ಪ್ರಾಚಾರ್ಯ ಪಿ.ಬಿ.ಕರೆಹೊಳಿ, ನಿಲಯ ಪಾಲಕ ಡಾ.ಶಿವಶಂಕರ್ ಕರಡಕಲ್ ವೇದಿಕೆಯಲ್ಲಿ ಇದ್ದರು.ವಿದ್ಯಾರ್ಥಿ ರಾಜೇಶ್ವರ ಸ್ವಾಗತಿಸಿದರು. ರಜಿಯಾ ಸಂಗಡಿಗರು ಪ್ರಾರ್ಥಿಸಿದರು. ಇಸ್ಮಾಯಿಲ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.