ADVERTISEMENT

ಬಿರುಗಾಳಿ ಸಹಿತ ಮಳೆ; ಹಾನಿ

​ಪ್ರಜಾವಾಣಿ ವಾರ್ತೆ
Published 12 ಮೇ 2018, 10:22 IST
Last Updated 12 ಮೇ 2018, 10:22 IST

ಕಾರಟಗಿ: ಪಟ್ಟಣದಲ್ಲಿ ಗುರುವಾರ ರಾತ್ರಿ ಗುಡುಗು, ಸಿಡಿಲು ಸಹಿತ ಬಿರುಗಾಳಿ, ಮಳೆಗೆ ವಿವಿಧೆಡೆ ಹಾನಿಯಾಗಿದೆ. ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ, ಯರಡೋಣ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಹಾನಿಯ ಪ್ರಮಾಣ ಎಷ್ಟು ಎಂಬುದರ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೂದಗುಂಪಾ ಗ್ರಾಮದಲ್ಲಿ ಗುಂಡಪ್ಪ ಕೋರಿ ಎಂಬುವರ ಗೋದಾಮಿನ ತಗಡುಗಳು ಹಾರಿದ್ದು, ಸಂಗ್ರಹಿಸಿಟ್ಟಿದ್ದ ಭತ್ತ ನಾಶವಾಗಿದೆ. ಹಾಲಸಮುದ್ರ, ತಿಮ್ಮಾಪುರ, ಯರಡೋಣ, ಪನ್ನಾಪುರ ರಸ್ತೆಯಲ್ಲಿಯ ಮನೆಗಳ ತಗಡಿನ ಶೀಟ್‌ಗಳು ಹಾರಿ ಹೋಗಿ ದೂರದಲ್ಲಿ ಬಿದ್ದಿವೆ. ಮರ್ಲಾನಹಳ್ಳಿಯ ಹುಳ್ಕಿಹಾಳ ತಿರುವು ಬಳಿ ಮರ ಉರುಳಿ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ.

ಬೂದಗುಂಪಾ ಭಾಗದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ದುರಸ್ತಿ ಕಾರ್ಯದಿಂದ ಬೆಳಿಗ್ಗೆಯಿಂದ ವಿದ್ಯುತ್ ವ್ಯತ್ಯಯ ಆಗುತ್ತಿದ್ದ ಕಾರಣ ಜನರು ತೊಂದರೆ ಅನುಭವಿಸಿದರು.

ADVERTISEMENT

ಕೆಲ ಕಡೆ ವಿದ್ಯುತ್‌ ಕಂಬ ಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ವಿಳಂಬವಾಯಿತು. ಇದರಿಂದ ಗ್ರಾಮಸ್ಥರಿಗೆ ಸಂಕಷ್ಟಕ್ಕೆ ಸಿಲುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.