ADVERTISEMENT

ಮತದಾರರ ಜಾಗೃತಿಗೆ ಮೊಂಬತ್ತಿ ಬೆಳಕು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 10:17 IST
Last Updated 22 ಮಾರ್ಚ್ 2014, 10:17 IST
ಮತದಾರರ ಜಾಗೃತಿಗೆ ಮೊಂಬತ್ತಿ ಬೆಳಕು
ಮತದಾರರ ಜಾಗೃತಿಗೆ ಮೊಂಬತ್ತಿ ಬೆಳಕು   

ಕೊಪ್ಪಳ: ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ನೋಂದಣಿ (ಸ್ವೀಪ್‌) ಕಾರ್ಯಕ್ರಮದ ಅಡಿ ಶುಕ್ರವಾರ  ನಗರದಲ್ಲಿ ಮೊಂಬತ್ತಿ ಬೆಳಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ನಗರದ ಸಾಹಿತ್ಯ ಭವನದ ಮುಂಭಾಗ ಸೇರಿದ ನಗರದ ವಿವಿಧ ಕಾಲೇಜು ಹಾಗೂ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು, ‘ಸ್ವೀಪ್‌’ ಸಮಿತಿ ಅಧಿಕಾರಿಗಳು ಮೊಂಬತ್ತಿ ಬೆಳಗಿ ಮತದಾನದ ಹಕ್ಕು ಚಲಾಯಿಸಲು ನಾಗರಿಕರಲ್ಲಿ ಮನವಿ ಮಾಡಿದರು.

ಬಸ್‌ ನಿಲ್ದಾಣ, ಜವಾಹರರಸ್ತೆಯಲ್ಲಿಯೂ ತೆರಳಿದ ವಿದ್ಯಾರ್ಥಿಗಳು ನಾಗರಿಕರಲ್ಲಿ ಮನವಿ ಮಾಡಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ ಡಿ. ಉದುಪುಡಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್‌ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.