ADVERTISEMENT

ವಿಜೃಂಭಣೆಯ ಶರಣಬಸವೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 8:45 IST
Last Updated 13 ಫೆಬ್ರುವರಿ 2011, 8:45 IST

ಕುಕನೂರು: ಪ್ರತಿ ವರ್ಷದ ಸಂಪ್ರದಾಯದಂತೆ ಸಮೀಪದ ಸುಕ್ಷೇತ್ರ ರಾಜೂರಿನ ಶರಣಬಸವೇಶ್ವರ ರಥೋತ್ಸವ ಗುರುವಾರ ಸಂಜೆ ಸಡಗರ, ಸಂಭ್ರಮದಿಂದ ನೆರವೇರಿತು.

ರಾಜೂರು-ಅಡ್ನೂರು ಸುಕ್ಷೇತ್ರದ ಪಟ್ಟಾಧ್ಯಕ್ಷರಾದ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮೀಜಿ, ಧಾರವಾಡ ಬಸವಲಿಂಗ ಮಹಾಸ್ವಾಮೀಜಿ, ರಾಜೂರು-ಬೆಳಗಾವಿ ಕುಮಾರದೇವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಭಾಜಾ,-ಭಜಂತ್ರಿ, ಜಾಂಜ್‌ಮೇಳ, ನಂದಿಕೋಲು ಮಹಿಳೆಯರ ಕಳಸದಾರತಿ ರಥೋತ್ಸವಕ್ಕೆ ಮೆರಗು ನೀಡಿದ್ದವು. ನೂತನ ಜೀವನಕ್ಕೆ ಕಾಲಿರಿಸಿದ ನವದಂಪತಿಗಳು, ಕುಕನೂರು, ದ್ಯಾಂಪೂರ, ಆಡೂರು, ಸಂಗನಹಾಲ, ಗುದ್ನೆಪ್ಪನಮಠ, ಕಕ್ಕಿಹಳ್ಳಿ, ಯಡಿಯಾಪುರ, ಬೆದವಟ್ಟಿ, ಮಸಬಹಂಚಿನಾಳ, ಮಂಡಲಗಿರಿ, ಇಟಗಿ ಬೆಣಕಲ್ ಸೇರಿದಂತೆ ಸುತ್ತ ಮುತ್ತಲು ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಪ್ಪ ಅರಕೇರಿ, ಶಿವಪ್ಪ ರಡ್ಡೇರ, ವೀರಭದ್ರಪ್ಪ ಸೋಂಪುರ, ಕಲ್ಲಪ್ಪ ಬಡಿಗೇರ, ಸೋಮಣ್ಣ ಅರಕೇರಿ, ಶೇಖಪ್ಪ ಅರಕೇರಿ ಸೇರಿದಂತೆ ಗ್ರಾಮದ ಜನಪ್ರತಿನಿಧಿಗಳು, ವಿವಿಧ ಯುವಕ ಮಂಡಳದ ಪದಾಧಿಕಾರಿಗಳು ಜಾತ್ರೋತ್ಸವದ ಯಶಸ್ವಿಗೆ ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.