ADVERTISEMENT

ವೇತನ ಬಾಕಿ: ಪೌರಕಾರ್ಮಿಕರ ಧರಣಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:59 IST
Last Updated 7 ಜನವರಿ 2014, 6:59 IST

ಕುಷ್ಟಗಿ: 2 ತಿಂಗಳಿಂದ ಬಾಕಿ ಉಳಿಸಿ ಕೊಂಡ ವೇತನ ಪಾವತಿಗೆ ಒತ್ತಾಯಿಸಿ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರು 2 ದಿನದಿಂದ ಕೆಲಸ ಸ್ಥಗಿತಗೊಳಿಸಿದ್ದಾರೆ.

ಸೋಮವಾರ ಪುರಸಭೆ ಕಚೇರಿಗೆ ಬಂದ 45 ಪೌರಕಾರ್ಮಿಕರು ಕೆಲಸಕ್ಕೆ ತೆರಳದೆ ಧರಣಿ ನಡೆಸಿದರು. ತಮ್ಮನ್ನು ಕೆಲಸಕ್ಕೆ ನೇಮಿಸಿಕೊಂಡ ಗುತ್ತಿಗೆದಾರರು 2 ತಿಂಗಳಾದರೂ ವೇತನ ಪಾವತಿಸಿಲ್ಲ. ಈ ವಿಷಯ ಪುರಸಭೆ ಸದಸ್ಯರು, ಅಧಿಕಾರಿ ಗಳು, ನೈರ್ಮಲ್ಯ ನಿರೀಕ್ಷಕರು ಮತ್ತು ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ. ಆದರೆ, ಯಾರೂ ಗಮನಹರಿಸಿಲ್ಲ ಎಂದು ದೂರಿದರು.

ವೇತನ ಕುಟುಂಬಗಳು ತೊಂದರೆಗೆ ಒಳಗಾಗಿವೆ. ಕೈಯಲ್ಲಿ ಕಾಸು ಇಲ್ಲದೆ ಮನೆಯಲ್ಲಿ ಒಲೆ ಹೊತ್ತಿಸಿದ ಸ್ಥಿತಿ ಇದೆ ಎಂದರು. ಪಟ್ಟಣ ಸ್ವಚ್ಛಗೊಳಿಸಿ ಅಂದ ವಾಗಿಸಲು ನಾವುಬೇಕು. ಆದರೆ, ಹೊಟ್ಟೆ ತುಂಬಿಸಿಕೊಳ್ಳಲು ಪರದಾಡ ಬೇಕಿದೆ. ಸಮಸ್ಯೆಯನ್ನು ಸಂಬಂಧಿಸಿ ದವರು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಧರಣಿ ನಿರತ ಪೌರಕಾರ್ಮಿಕರು ಅಳಲು ತೋಡಿಕೊಂಡರು.

ಪ್ರತಿಬಾರಿ ಪ್ರತಿಭಟನೆ ನಡೆಸಿ ವೇತನ ಪಡೆಯುವ ಸ್ಥಿತಿ ಇದೆ ಎಂದು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮೌನೇಶ ಹಳ್ಳಿ, ವಿರೂಪಾಕ್ಷಪ್ಪ, ಕಟ್ಟೆವ್ವ, ರಮೇಶ ಚಲವಾದಿ, ವೆಂಕಟೇಶ, ವೆಂಕಟೇಶ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು.

ವೇತನ ಪಾವತಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಪತ್ರಬರೆಯುವುದಾಗಿ ಪುರಸಭೆ ಸದಸ್ಯ ಚನ್ನಪ್ಪ ನಾಲಗಾರ ತಿಳಿಸಿದರು.
ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿ ಸಿದ್ದರಿಂದ ಪಟ್ಟಣದ ಪ್ರಮುಖ ಸ್ಥಳ ಗಳಲ್ಲಿ ಕಸ ರಾಶಿ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.