ADVERTISEMENT

ಸಚಿವರಿಂದ ಜಲಸಂರಕ್ಷಣೆ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 10:50 IST
Last Updated 16 ಸೆಪ್ಟೆಂಬರ್ 2013, 10:50 IST

ಕೊಪ್ಪಳ: ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ನೇತೃತ್ವದ ತಂಡ ರಾಜಸ್ಥಾನ ರಾಜ್ಯಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಈ ತಂಡ ಭಾನುವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಝಾಜ್ವಲಿ ನದಿ ಪಾತ್ರದ ಪ್ರದೇಶಗಳಿಗೆ ಭೇಟಿ ನೀಡಿತು.

ಸಚಿವ ತಂಗಡಗಿ ನೇತೃತ್ವದಲ್ಲಿ ರಾಜ್ಯದ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮತ್ತ ಉನ್ನತ ಅಧಿಕಾರಿಗಳು ಪ್ರವಾಸದಲ್ಲಿದ್ದಾರೆ. 
ತರುಣ್ ಭಾರತ್ ಸಂಘದ ಅಧ್ಯಕ್ಷ ಡಾ.ರಾಜೇಂದ್ರಸಿಂಗ್ ಅವರು ಬತ್ತಿದ ನದಿಗಳು ಮತ್ತೆ ನೀರು ಉಕ್ಕಿದಪಡೆದ ಯಶೋಗಾಥೆಯನ್ನು ತಂಡಕ್ಕೆ ಮನವರಿಕೆ ಮಾಡಿಕೊಟ್ಟರು. ನೀರು ಹರಿವಿನ ಅಸ್ತಿತ್ವ ಕಳೆದುಕೊಂಡಿದ್ದ ಝಾಜ್ವರಿ ನದಿಯನ್ನು ರಾಜಸ್ಥಾನ ಸರ್ಕಾರ ಹಾಗೂ ತರುಣ್ ಭಾರತ ಸ್ವಯಂ ಸೇವಾ ಸಂಘದ ಸಹಭಾಗಿತ್ವ ದಲ್ಲಿ ನದಿಯ ಪುನಃಶ್ಚೇತನ ಕಾರ್ಯ ಕ್ರಮ ಹಮ್ಮಿಕೊಂಡ ಪರಿಣಾಮವಾಗಿ, ಈಗ ನದಿ ನೀರು ಹರಿಯತೊಡಗಿದೆ. ನೀರಿನ ಕೊರತೆ ಎದುರಿಸುತ್ತಿದ್ದ ಸಾರಿಸ್ಕಾ, ಸುಕೋಲ, ದಬ್ಲಿ, ಸಿಲಿಬೆರಿ ಮುಂತಾದ ಗ್ರಾಮಗಳು, ಪುನಃ ಹಸಿರಿನಿಂದ ಕಂಗೊಳಿಸುತ್ತಿವೆ.

ವರ್ಷವಿಡಿ ನದಿಯಲ್ಲಿ ನೀರಿನ ಹರಿವು ಇರುತ್ತದೆ. ಕುಡಿಯುವ ನೀರಿನ ತೊಂದರೆಗೂ ಸಹ ಪರಿಹಾರ ಕಂಡುಕೊಂಡರುವುದನ್ನು ನೋಡಿ ಸಚಿವ ತಂಗಡಗಿ ಅಚ್ಚರಿ ವ್ಯಕ್ತಪಡಿಸಿದರು.

ಜಯಂತಿ: ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ನೇತೃತ್ವದ ತಂಡದಿಂದ ರಾಜಸ್ಥಾನದ ಅಲ್ವಾರ್ ಜಿಲ್ಲಾ ಕೇಂದ್ರದಲ್ಲಿ ಎಂಜಿನಿಯರ್‌ಗಳ ದಿನಾಚರಣೆ ಆಚರಿಸಲಾಯಿತು. ಸಣ್ಣ ನೀರಾವರಿ ಇಲಾಖೆಯ ರಾಜ್ಯದ ಕಾರ್ಯದರ್ಶಿ ಪ್ರಭಾಕರ್ ಚಿಣಿ, ಸಚಿವರ ಆಪ್ತ ಕಾರ್ಯದರ್ಶಿ ಆ್ಯಂಟನಿ ಮೆಂಡೋನ್ಸ, ಕರ್ನಾಟಕ ದಕ್ಷಿಣ ವಲಯದ ಮುಖ್ಯ ಎಂಜಿನಿ ಯರ್ ಶ್ರೀನಿವಾಸ್, ಉತ್ತರ ವಲಯದ

ಮುಖ್ಯ ಎಂಜಿನಿಯರ್ ಎ.ಎನ್. ಜಾನ್ವೇಕರ್. ಅಧೀಕ್ಷಕ ಅಭಿಯಂತರಾದ ಬೆಳಗಾವಿಯ ಸುರೇಶ್, ಮೈಸೂರಿನ ಸುರೇಶ್ಬಾಬು, ಗುಲ್ಬರ್ಗದ ಶ್ರೀಹರಿ, ಬೆಂಗಳೂರಿನ ರಾಜೇಶ್, ಬಿಜಾಪುರದ ಹನುಮಂತರಾಯಪ್ಪ, ಬೆಳಗಾವಿ ವಿಭಾಗದ ವಾಲಿ, ಶಿವಮೊಗ್ಗ ವಿಭಾಗದ ಪ್ರಕಾಶ್, ಸಚಿವರ ತಾಂತ್ರಿಕ ಸಲಹೆಗಾರ ಸುಧೀರ್ ಸಜ್ಜನ್  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.