ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಗ್ರಾಮ

ಕೆ.ಶರಣಬಸವ ನವಲಹಳ್ಳಿ
Published 28 ನವೆಂಬರ್ 2017, 9:20 IST
Last Updated 28 ನವೆಂಬರ್ 2017, 9:20 IST
ತಾವರಗೇರಾ ಸಮೀಪದ ವಿರುಪಾಪುರದಲ್ಲಿ ಅಪೂರ್ಣಗೊಂಡಿರುವ ನೀರಿನ ಟ್ಯಾಂಕ್‌ ಕಾಮಗಾರಿ
ತಾವರಗೇರಾ ಸಮೀಪದ ವಿರುಪಾಪುರದಲ್ಲಿ ಅಪೂರ್ಣಗೊಂಡಿರುವ ನೀರಿನ ಟ್ಯಾಂಕ್‌ ಕಾಮಗಾರಿ   

ತಾವರಗೇರಾ: ಸಮೀಪದ ವಿರುಪಾಪುರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ವಿಳಂಬವಾಗಿದೆ. ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮದಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ.

ಗ್ರಾಮಕ್ಕೆ ಕಿರುನೀರು ಸರಬರಾಜು ನೀರು ಪೂರೈಕೆ ಆಗುತ್ತಿಲ್ಲ. ಗ್ರಾಮಸ್ಥರು ಪ್ಲೋರೈಡ್ ನೀರು ಕುಡಿಯುತ್ತಿದ್ದು, ನೀರು ಶುದ್ಧೀಕರಣ ಘಟಕ ನಿರ್ಮಿಸಬೇಕು. ಗ್ರಾಮ ಸಂಪರ್ಕ ರಸ್ತೆಗಳ ಡಾಂಬರೀಕರಣವಾಗಿಲ್ಲ.

ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ವಿಳಂಬವಾಗದೆ. ನನೆಗುದಿಗೆ ಬಿದ್ದಿರುವ ಕಾಮಗಾರಿ ಮುಗಿಸದ ಅಧಿಕಾರಿಗಳು ಮತ್ತು ಗುತ್ತೆಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ADVERTISEMENT

ಕಳೆದ 5 ವರ್ಷದ ಹಿಂದೆ ಗ್ರಾಮಕ್ಕೆ ಕುಡಿವ ನೀರು ಸರಬರಾಜು ಮಾಡಲು ಆರಂಭವಾದ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ಇನ್ನೂ ಮುಗಿದಿಲ್ಲ. ಗುತ್ತೆದಾರರು ಅರೆಬರೆ ಕಾಮಗಾರಿ ಮಾಡಿದ್ದಾರೆ. ಅಲ್ಲದೆ ಜಿಲ್ಲಾ ಪಂಚಾಯಿತಿ ನಿರ್ಮಿಸಿರುವ ಕಿರುನೀರು ಸರಬರಾಜು ತೊಟ್ಟಿಗೂ ನೀರು ಸರಬರಾಜು ಮಾಡುತ್ತಿಲ್ಲ ಎಂದು ಮುದಕಮ್ಮ ಕಮತರ ಹೇಳಿದರು

ಕಳೆದ 4 ತಿಂಗಳಿಂದ ಕೂಲಿಕಾರರಿಗೆ ಖಾತ್ರಿ ಯೋಜನೆ ಕಾಮಗಾರಿ ಕೆಲಸ ನೀಡುತ್ತಿಲ್ಲ. ಇದರಿಂದ ಕೆಲವು ಕುಟುಂಬಗಳು ನಗರಕ್ಕೆ ಗುಳೆ ಹೋಗುವಂತಹ ಪರಿಸ್ಥಿತಿ ಬಂದಿದೆ. ಕೆಲವರಿಗೆ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಸರ್ಕಾರದ ವಿವಿಧ ಯೋಜನೆಗಳು ಶ್ರೀಮಂತರ ಪಾಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

* * 

5 ವರ್ಷದ ಹಿಂದೆ ಆರಂಭಿಸಿರುವ ನೀರಿನ ಟ್ಯಾಂಕ್ ಕಾಮಗಾರಿ ಮುಗಿದಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಬೇಕಿದೆ.
ನಾಗರಾಜ ಲೋಕರೆ
ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.