ADVERTISEMENT

`ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ಗಣನೀಯ'

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 9:04 IST
Last Updated 13 ಜುಲೈ 2013, 9:04 IST
ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಕವಿಸಮಯ 151ನೇ ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ದತ್ತಿನಿಧಿ ಬಹುಮಾನ ವಿಜೇತ ಶಿ.ಕಾ. ಬಡಿಗೇರ ಹಾಗೂ ಮಾಲಾ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಸಿರಾಜ್ ಬಿಸಿರಹಳ್ಳಿ, ಮಹಾಂತೇಶ ಮಲ್ಲನಗೌಡರ, ಶಿವಾನಂದ ಹೊದ್ಲೂರ ಇದ್ದರು
ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಕವಿಸಮಯ 151ನೇ ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ದತ್ತಿನಿಧಿ ಬಹುಮಾನ ವಿಜೇತ ಶಿ.ಕಾ. ಬಡಿಗೇರ ಹಾಗೂ ಮಾಲಾ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಸಿರಾಜ್ ಬಿಸಿರಹಳ್ಳಿ, ಮಹಾಂತೇಶ ಮಲ್ಲನಗೌಡರ, ಶಿವಾನಂದ ಹೊದ್ಲೂರ ಇದ್ದರು   

ಕೊಪ್ಪಳ: ಜಿಲ್ಲೆಯಲ್ಲಿ ಇತ್ತೀಚೆಗೆ ಶಿಷ್ಟ ಸಾಹಿತ್ಯ ಬೆಳೆಯುತ್ತಿದೆ. ಜಿಲ್ಲೆಯ ಸಾಹಿತ್ಯಿಕ ಕೊಡುಗೆ ಗಮನಾರ್ಹ ಎಂದು ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಹೇಳಿದರು.

ಕನ್ನಡನೆಟ್ ಡಾಟ್ ಕಾಂ ಕವಿ ಸಮೂಹ ನಗರದ ಈಶ್ವರ ಗುಡಿ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ 151ನೇ ಕವಿಸಮಯ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಉತ್ತಮ ಬರಹಗಾರು, ಹೋರಾಟಗಾರರು, ಚಿಂತಕರು ಇದ್ದಾರೆ. ವಿವಿಧ ಅಕಾಡೆಮಿಗಳ ನೇಮಕದಲ್ಲಿ ಅವರನ್ನು ಸರಕಾರ ಪರಿಗಣಿಸಬೇಕು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿಗಮ, ಮಂಡಳಿ ಹಾಗೂ ಅಕಾಡೆಮಿಗಳ ಸದಸ್ಯರು, ಅಧ್ಯಕ್ಷರ ನೇಮಕಾತಿ ನಡೆಯುತ್ತಿದೆ. ಈ ಬಾರಿಯಾದರೂ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಅವರು ಆಶಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿನಿಧಿ ಬಹುಮಾನ ಪಡೆದ ಶಿ.ಕಾ.ಬಡಿಗೇರ ಹಾಗೂ ಮಾಲಾ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.  ಕವಿಗೋಷ್ಠಿಯಲ್ಲಿ ಎ.ಪಿ.ಅಂಗಡಿ, ಶಾಂತಾದೇವಿ ಹಿರೇಮಠ, ಪುಷ್ಪಲತಾ ಏಳುಬಾವಿ, ವಿಜಯಲಕ್ಷ್ಮೀ ಮಠದ, ಅನಸೂಯಾ ಜಾಗಿರದಾರ, ಮಾಲಾ ಬಡಿಗೇರ, ಸಿರಾಜ್ ಬಿಸರಳ್ಳಿ ಕವನ ವಾಚನ ಮಾಡಿದರು.

ಶಿವಾನಂದ ಹೊದ್ಲೂರ, ಹನುಮಂತಪ್ಪ ಅಂಡಗಿ, ರಾಕೇಶ ಕಾಂಬ್ಳೇಕರ್, ಬಸವರಾಜ ಸಂಕನಗೌಡರ ಉಪಸ್ಥಿತರಿದ್ದರು. ಸಿರಾಜ್ ಬಿಸರಳ್ಳಿ ಸ್ವಾಗತಿಸಿದರು. ಮಹೇಶ ಬಳ್ಳಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.