ADVERTISEMENT

ಹನುಮನಾಳದಲ್ಲಿ ಬಾಲ್ಯ ವಿವಾಹ!

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 6:35 IST
Last Updated 3 ಏಪ್ರಿಲ್ 2012, 6:35 IST

ಕನಕಗಿರಿ: ಕೊಪ್ಪಳ ಜಿಲ್ಲೆಯ ಕನಕಗಿರಿ ಸಮೀಪದ ಹನುಮನಾಳ ಗ್ರಾಮದ ಶ್ರೀ ಬಸವಲಿಂಗೇಶ್ವರ ದೇಶಿಕೇಂದ್ರದ ಶಿವಯೋಗಿಗಳ ಅವರ ಜಾತ್ರಾ ಮಹೋತ್ಸವದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಬಗ್ಗೆ ತಿಳಿದು ಬಂದಿದೆ.

ಸೋಮವಾರ ಊಟಗನೂರು ಮರಿ ಬಸವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ 11 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ಮೂರ‌್ನಾಲ್ಕು ಜೋಡಿಗಳು ಅಪ್ರಾಪ್ತ ವಯಸ್ಕರಾಗಿದ್ದರು ಎಂದು ತಿಳಿದು ಬಂದಿದೆ. ಹನುಮನಾಳ ಗ್ರಾಮದ ಭಕ್ತರ ಹೆಸರಿನಲ್ಲಿ ನಡೆದ ಈ ಮದುವೆಯ ಸಂಘಟಕರು ಬಾಲ್ಯ ವಿವಾಹಕ್ಕೆ ಅವಕಾಶ ಇಲ್ಲ ಎಂದು ಕರಪತ್ರ ಹಾಕಿಸಿದ್ದರೂ ಉಪಯೋಗವಾಗಲಿಲ್ಲ, 

ಶಿರಿವಾರ ಗ್ರಾಮದ ದುರಗಪ್ಪ ಅವರೊಂದಿಗೆ ವಿವಾಹದ ಅದೇ ಗ್ರಾಮದ ಹನುಮಂತಿಗೆ ಇನ್ನು ಹದಿನೆಂಟು ವಯಸು ಆಗಿರಲಿಲ್ಲ, ಅಲ್ಲದೆ ಈ ಸಮಯದಲ್ಲಿ ಮದುವೆಯಾದ ಇನ್ನೇರಡು ಜೋಡಿಗಳು ಸರ್ಕಾರದ ಕಾನೂನು ಪ್ರಕಾರ 18 ವಯಸು ತುಂಬಿರಲಿಲ್ಲ ಎಂದು ಅಲ್ಲಿ ಹಾಜರಿದ್ದ ಕೆಲವರು ಮಾಹಿತಿ  ನೀಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.