ADVERTISEMENT

ಹಿಟ್ನಾಳ– ಅಕ್ರಮ ವಿದ್ಯುತ್‌ ಸಂಪರ್ಕ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 7:06 IST
Last Updated 21 ಸೆಪ್ಟೆಂಬರ್ 2013, 7:06 IST

ಮುನಿರಾಬಾದ್‌: ಇಲ್ಲಿಗೆ ಸಮೀಪ ಹಿಟ್ನಾಳ ಗ್ರಾಮಲ್ಲಿ ನ್ಯಾಯಾಲಯ­ದಿಂದ ತಡೆಯಾಜ್ಞೆ ಇದ್ದರೂ ನಿವಾಸಿಯೊಬ್ಬರು ಈಚೆಗೆ ಅಕ್ರಮ ಕಟ್ಟಡ ನಿರ್ಮಿಸಿಕೊಂಡಿದ್ದು ನಂತರ ವಿದ್ಯುತ್‌ ಸಂಪರ್ಕವನ್ನೂ ಕೂಡ ಅಕ್ರಮವಾಗಿ ಪಡೆದಿದ್ದಾಗಿ ಗ್ರಾಮದ ರಾಮಣ್ಣ ನಾಗಪ್ಪ ಕಮ್ಮಾರ ಆರೋಪಿಸಿದ್ದಾರೆ.

ಹಿಟ್ನಾಳ ಗ್ರಾಮದ ರಾಮಣ್ಣ ನಾಗಪ್ಪ ಕಮ್ಮಾರ ಈ ಬಗೆ್ಗ ಹೇಳಿಕೆ ನೀಡಿ, ಗ್ರಾಮದ ತಮ್ಮ ಹಳೆ ಸರ್ವೆ ನಂಬರ್‌ ಉಳ್ಳ ಜಮೀನು ವ್ಯಾಪಿ್ತಯ ನಿವೇಶನ ಸಂಖ್ಯೆ 399ರಲಿ್ಲ ಗ್ರಾಮ ಪಂಚಾಯಿತಿಯ ಕಟ್ಟಡ ಪರವಾನಗಿ ಇಲ್ಲದೆಯೇ ಪಕೀರಸಾಬ್‌ ಪೀರಸಾಬ್‌  ಗೊಂದಿಹೊಸಳಿ್ಳ ಎಂಬ­ವವರು ಮನೆ ನಿರ್ಮಿಸಿಕೊಂಡಿದ್ದು ವಿವಾದ ನ್ಯಾಯಾಲ­ಯ­ದಲಿ್ಲದೆ. ಈ ಮಧ್ಯೆ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲಿ್ಲಸಿದ್ದ ಪಕೀರಸಾಬ್‌ ಅರ್ಜಿಯ ಜೊತೆ ಗ್ರಾಮ ಪಂಚಾಯಿತಿಯ ಸುಳು್ಳ ದಾಖಲೆ­ಗಳನು್ನ ನೀಡಿದ್ದಾಗಿ ಕೂಡ ತಿಳಿಸಿದ್ದಾರೆ.

ಗ್ರಾಮದ ನಿವೇಶನ ಸಂಖೆ್ಯ 399 ರಲಿ್ಲ ಕಟ್ಟಡ ನಿರ್ಮಿಸಲು ಈ ಮೊದಲು ಕಟ್ಟಡ ಪರವಾನಗಿ ನೀಡಿದ್ದ ಗ್ರಾಮ ಪಂಚಾಯಿತಿ ‘ಪ್ರಕರಣ ನ್ಯಾಯಾಲಯ­ದಲಿ್ಲರುವುದರಿಂದ ಕಟ್ಟಡ ಪರವಾನಗಿ­ಯನು್ನ ತಾತಾ್ಕಲಿಕವಾಗಿ ರದು್ದ ಪಡಿಸಲಾ­ಗಿದ್ದು, ಈ ಆದೇಶವನು್ನ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದಲಿ್ಲ ಮುಂದಿನ ಆಗುಹೋಗುಗಳಿಗೆ ನೀವೇ ಜವಬ್ದಾರರು’ ಎಂಬ ಎಚ್ಚರಿಕೆಯ ಆದೇಶವನು್ನ ನೀಡಿದ್ದಾಗಿ ರಾಮಣ್ಣ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಪ್ರವೇಶ: ಕೊಪ್ಪಳ ಸಿವಿಲ್‌ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕಟ್ಟಡ ಕಟ್ಟಲು ಪರವಾನಗಿ ನೀಡುವಂತೆ ಜಿಲ್ಲಾಧಿಕಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ‘ಹುಕುಂ’ ನೀಡಿದ್ದಲ್ಲದೇ ಕಟ್ಟಡ ನಿರ್ಮಾಣಕೆ್ಕ ಪೊಲೀಸ್‌ ಪೇದೆಯ ರಕ್ಷಣೆ ನೀಡಿರುವ ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟಿ್ಟದೆ ಎನು್ನತ್ತಾರೆ ರಾಮಣ್ಣ.

ಅಕ್ರಮ ಕಟ್ಟಡಕೆ್ಕ ಅಕ್ರಮ ವಿದ್ಯುತ್‌: ಅಕ್ರಮವಾಗಿ ನಿರ್ಮಿಸಿದ್ದ ಮನೆಗೆ ವಿದ್ಯುತ್‌ ಸಂಪರ್ಕ ಪಡೆಯಲು ಪಕೀರಸಾಬ್ ಮತೆ್ತ ‘ನಿರಕ್ಷೇಪಣಾ’ (ಎನ್‌ಒಸಿ) ಪತ್ರಕ್ಕಾಗಿ ಗ್ರಾಮ ಪಂಚಾಯಿತಿಗೆ ತೆರಳಿದ್ದಾರೆ. ಆಗ ಅಕ್ರಮ ಕಟ್ಟಡಕೆ್ಕ ‘ನಿರಕ್ಷೇಪಣಾ’ ಪತ್ರ ನೀಡಲಾಗುವುದಿಲ್ಲ ಎಂದು ಪಿಡಿಒ ಹೇಳಿದ್ದಾರೆ.

ಸುಳು್ಳ ದಾಖಲೆ ಸಲಿ್ಲಕೆ: ಈ ಮಧೆ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬುಸಾಬ್‌ ಸೈಯದ್‌ ದಿ.25.2.­2013 ರಂದು ಸಹಿ ಮಾಡಿದ್ದ  ‘ನಿರಕ್ಷೇ­ಪಣಾ’ ಪತ್ರವನು್ನ ಜೆಸ್ಕಾಂಗೆ ಸಲಿ್ಲಸಿದ ಪಕೀರಸಾಬ್‌ ವಿದ್ಯುತ್‌ ಸಂಪರ್ಕ ಪಡೆ­ಯುವಲಿ್ಲ ಯಶಸ್ವಿಯಾದರು. ಆದರೆ ಬಾಬು ಅವರ  ಅವಧಿ 17.9.2012ಕೆ್ಕ ಮುಕ್ತಾಯವಾಗಿತು್ತ ಎಂದು ಸ್ವತಹ ಬಾಬುಸಾಬ್‌ ಸೈಯ್ಯದ್‌ ‘ಪ್ರಜಾವಾಣಿ’ ಗೆ ಸ್ಪಷ್ಟಪಡಿಸಿದ್ದಾರೆ.

ಕಳೆದ ಮೇ ತಿಂಗಳಲಿ್ಲ ಪಿಡಿಒ ನೀಡಿರುವ ಹಿಂಬರಹದಲಿ್ಲ ನಮ್ಮ ಪಂಚಾ­ಯಿತಿಯಿಂದ ಜೆಸ್ಕಾಂಗೆ ಯಾವು­ದೇ ತರದ ‘ನಿರಕ್ಷೇಪಣಾ ಪತ್ರ’ ನೀಡಿರುವುದಿಲ್ಲ. ಪ್ರಕರಣ ನ್ಯಾಯಾ­ಲಯ­ದಲಿ್ಲರುವುದರಿಂದ ಪತ್ರ ನೀಡಲು ಬರುವುದೂ ಇಲ್ಲ ಎಂದಿದ್ದಾರೆ.

ಮೌನ ವಹಿಸಿದ ಜೆಸ್ಕಾಂ : ಗ್ರಾಮ ಪಂಚಾಯಿತಿ ಲೆಟರ್‌ ಹೆಡ್‌ನಲಿ್ಲ ನಮಗೆ ಪತ್ರ ನೀಡಲಾಗಿದೆ. ಅದು ಅಸಲಿಯೋ ನಕಲಿಯೋ ಎಂಬ ಬಗೆ್ಗ ನಾವು ತಲೆಕೆಡಿಸಿಕೊಳು್ಳವುದಿಲ್ಲ ಎನು್ನವ ಅಧಿಕಾರಿಗಳು ಸಂಪರ್ಕ ನೀಡಿದ್ದನು್ನ ಸಮರ್ಥಿಸಿಕೊಳು್ಳತ್ತಾರೆ. ಆದರೆ ಸಂಪರ್ಕಕೆ್ಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ‘ನಿರಕ್ಷೇಪಣಾ ಪತ್ರ’ ಅತ್ಯ­ವಶ್ಯ ಎಂದು ಒಪ್ಪಿಕೊಳು್ಳವ ಅಧಿಕಾರಿ­ಗಳು, ಗ್ರಾಮ ಪಂಚಾಯಿತಿ  ಅಧ್ಯಕ್ಷ ಮತು್ತ ಕಾರ್ಯದರ್ಶಿಯ ಪತ್ರವನ್ನೇ ಅಧಿಕೃತ ಪತ್ರ ಎಂದು ನಂಬಿಕೊಂಡಿ­ದ್ದಾರೆ ಎನು್ನವ ರಾಮಣ್ಣ ಕಮ್ಮಾರ ನ್ಯಾಯಾಲಯದ ತೀರ್ಪನು್ನ ಎದುರು ನೋಡುತಿ್ತರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.