ADVERTISEMENT

ಹೈ.ಕಕ್ಕೆ ಬೇರೆ ಜಿಲ್ಲೆ ಗ್ರಾಮಗಳ ಸೇರ್ಪಡೆ ಇಲ್ಲ: ರಾಯರಡ್ಡಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 10:51 IST
Last Updated 13 ಮಾರ್ಚ್ 2018, 10:51 IST
ಯಲಬುರ್ಗಾದಲ್ಲಿ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯಿಂದ ಈಚೆಗೆ ಮನವಿ ಸಲ್ಲಿಸಲಾಯಿತು
ಯಲಬುರ್ಗಾದಲ್ಲಿ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯಿಂದ ಈಚೆಗೆ ಮನವಿ ಸಲ್ಲಿಸಲಾಯಿತು   

ಯಲಬುರ್ಗಾ: ಹೈದರಾಬಾದ್ ಕರ್ನಾ ಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ 371(ಜೆ) ಕಲಂ ಜಾರಿಗೆ ತರಲಾಗಿದೆ. ಇದರ ವ್ಯಾಪ್ತಿಗೆ ಬೇರೆ ಯಾವುದೇ ಜಿಲ್ಲೆಯ ಗ್ರಾಮಗಳ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು.

ಯಲಬುರ್ಗಾಕ್ಕೆ ಭಾನುವಾರ ಭೇಡಿ ನೀಡಿದ ಅವರಿಗೆ ಹೈ.ಕ ಹೋರಾಟ ಸಮಿತಿಯ ಪದಾಧಿಕಾರಿಗಳು ಮಾಡಿದ ಮನವಿಗೆ ಪ್ರತಿಕ್ರಿಯಿಸಿ, ’ಈ ಭಾಗ ಅತ್ಯಂತ ಹಿಂದುಳಿದಿರುವ ಕಾರಣ 371(ಜೆ) ಕಲಂ ತಿದ್ದುಪಡಿಯ ಮೂಲಕ ಅಭಿವೃದ್ಧಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಅನ್ಯ ಜಿಲ್ಲೆಯ ಗ್ರಾಮಗಳ ಸೇರ್ಪಡೆಗೆ ಅವಕಾಶವಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಕೂಡದು ಎಂದು ನಿರ್ಣಯ ಕೈಗೊಳ್ಳಲಾಗಿದೆ’ ಎಂದು ನುಡಿದರು.

'1950ರ ಪೂರ್ವದಲ್ಲಿ ಹರಪನ ಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಸೇರಿತ್ತು. ತದನಂತರ ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಂಡಿದ್ದರಿಂದ 371(ಜೆ) ಸೌಲಭ್ಯಗಳಿಂದ ವಂಚಿತವಾಗಿತ್ತು. ಇದನ್ನು ಹೊರತು ಪಡಿಸಿ ಬೇರೆ ಗ್ರಾಮಗಳನ್ನು ಮೀಸಲಾತಿ ವ್ಯಾಪ್ತಿಗೆ ಸೇರಿಸಿಲ್ಲ’ ಎಂದು ಹೇಳಿದರು.

ADVERTISEMENT

ಹೋರಾಟ ಸಮಿತಿ ಅಧ್ಯಕ್ಷ ಮುನಿ ಯಪ್ಪ ಹುಬ್ಬಳ್ಳಿ ಮಾತನಾಡಿ, ‘371 (ಜೆ) ಅನುಷ್ಠಾನದಲ್ಲಿ ಲೋಪ ಆಗದಂತೆ ಜಾರಿಗೊಳಿಸಬೇಕು. ಸೌಲಭ್ಯಗಳನ್ನು ಪಡೆಯಲು ಹೊಂಚು ಹಾಕುತ್ತಿರುವ ನೆರೆಹೊರೆಯ ಗ್ರಾಮಸ್ಥರು ಸೌಲಭ್ಯ ಪಡೆಯದಂತೆ ಜಾಗೃತ ದಳ ರಚಿಸ ಬೇಕು. ಸ್ಥಳೀಯ ಅಧಿಕಾರಿಗಳು ಹಣಕ್ಕಾಗಿ ಅಕ್ರಮವಾಗಿ ಪ್ರಮಾಣಪತ್ರ ನೀಡುತ್ತಿದ್ದಾರೆ ಎಬ ಆರೋಪಗಳಿವೆ. ಈ ಬಗ್ಗೆ ವಿಶೇಷ ಗಮನ ಕೊಡಬೇಕು’ ಎಂದರು.

ಯುವ ಮುಖಂಡರಾದ ಮಲ್ಲಪ್ಪ ಮಾಟರಂಗಿ, ಮಾಹಾಂತೇಶ ಚಲವಾದಿ, ಸಂತೋಷ ಬಂಡ್ರಿ, ಈರಣ್ಣ ತೋಟದ, ಶರಣಬಸಪ್ಪ ದಾನಕೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.