ADVERTISEMENT

ಥಾಯ್ಲೆಂಡ್‌ನಿಂದ ಹೈಡ್ರೊ ಗಾಂಜಾ ತಂದು ಮಾರಾಟ: ಕೊಪ್ಪಳದಲ್ಲಿ 8 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 28 ಮೇ 2025, 20:05 IST
Last Updated 28 ಮೇ 2025, 20:05 IST
ಪೊಲೀಸರು ವಶಪಡಿಸಿಕೊಂಡು ಹೈಡ್ರೊ ಗಾಂಜಾ
ಪೊಲೀಸರು ವಶಪಡಿಸಿಕೊಂಡು ಹೈಡ್ರೊ ಗಾಂಜಾ   

ಕೊಪ್ಪಳ: ಥಾಯ್ಲೆಂಡ್‌ನಿಂದ ಹೈಡ್ರೊ ಗಾಂಜಾ ತಂದು ಮಾರಾಟ ಮಾಡಲು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಎಂಟು ಜನ ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಗಂಗಾವತಿಯಲ್ಲಿ ಬುಧವಾರ ಬಂಧಿಸಿದ್ದಾರೆ.

ಬಿಇ ಪದವೀಧರ, ಬಿಕಾಂ ಹೀಗೆ ಉತ್ತಮ ಓದಿನ ಹಿನ್ನೆಲೆ ಹೊಂದಿರುವ ಕೇರಳದ ಕಣ್ಣೂರಿನ ಮೂವರು ಮತ್ತು ಬಳ್ಳಾರಿಯ ಐದು ಜನರನ್ನು ಬಂಧಿಸಲಾಗಿದ್ದು, ಅವರಿಂದ ಅಂದಾಜು ₹ 18.06 ಲಕ್ಷ ಮೌಲ್ಯದ 1,806 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಅನುಮಾನ ಬರದಂತೆ ಎಚ್ಚರ ವಹಿಸಲು ಬೆಳ್ಳಿ ಬಣ್ಣದ ಕವಚದಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದರು.

‘ಇದೇ 24ರಂದು ಗಂಗಾವತಿಯಲ್ಲಿ ಗಾಂಜಾ ಸೇವನೆ ಪ್ರಕರಣ ಕುರಿತು ಎಫ್‌ಐಆರ್‌ ದಾಖಲಾಗಿತ್ತು. ಅದರ ಮೂಲ ಹುಡುಕಿ ತನಿಖೆ ನಡೆಸುತ್ತಿದ್ದಾಗ ಈ ಘಟನೆ ಬಹಿರಂಗವಾಗಿದೆ. ಆರೋಪಿಗಳಿಂದ ಎರಡು ಕಾರು ಹಾಗೂ ಎಂಟು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರು ಥಾಯ್ಲೆಂಡ್‌ನಿಂದ ಅಕ್ರಮವಾಗಿ ಹೈಡ್ರೊ ಗಾಂಜಾವನ್ನು ಹೈದರಾಬಾದ್ ಮೂಲಕ ತರಿಸಿ ಇಲ್ಲಿಗೆ ತೆಗೆದುಕೊಂಡು ಬಂದಿದ್ದರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.