ಕಾರಟಗಿ: ಪಾಂಡುರಂಗ ರುಕ್ಮೀಣಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಪಂಢರಪುರಕ್ಕೆ ಪಟ್ಟಣ ಸಹಿತ ವಿವಿಧೆಡೆಯ 84 ಭಕ್ತರು ಪಾದಯಾತ್ರೆಯ ಮೂಲಕ ಗುರುವಾರ ತೆರಳಿದರು.
ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದಿಂಡಿ ಉತ್ಸವದೊಂದಿಗೆ ಪಾದಯಾತ್ರೆ ಆರಂಭಿಸಿದರು. ಶರಣಬಸವೇಶ್ವರ ದೇವಸ್ಥಾನ, ಸಾಲೋಣಿ ಮಾರ್ಗವಾಗಿ ಕೆರೆಬಸವೇಶ್ವರ ದೇವಾಲಯದಲ್ಲಿ ದರ್ಶನ ಪಡೆದು ಪಾದಯಾತ್ರೆ ಮುಂದುವರಿಸಿದರು.
ತಲೇಖಾನ ವೀರಭದ್ರ ಶರಣರು, ನೇತೃತ್ವ ವಹಿಸಿದ್ದ ಸಂತ ವೆಂಕಟೇಶಪ್ಪ, ಯಲ್ಲಪ್ಪ ಕಟ್ಟೀಮನಿ ಪ್ರತಿಕ್ರಿಯಿಸಿ, ನಮ್ಮ ತಂಡ ನವೆಂಬರ್ 9ರಂದು 380 ಕಿ.ಮೀ ಕ್ರಮಿಸಿ ಪಂಢರಪುರ ತಲುಪಲಿದೆ’ ಎಂದರು.
ಟ್ರಸ್ಟ್‌ನ ಯಮನಪ್ಪ ನರೇರಕಂಠೆಪ್ಪ ಛತ್ರ, ಅಮರೇಶಪ್ಪ, ಲವಣ್ಣ, ಯಮನೂರಸಾಬ, ಇಂದ್ರಪ್ಪ, ನರೇಶಪ್ಪ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.