ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ರೆಸಾರ್ಟ್‌ವೊಂದರಲ್ಲಿ ಜರ್ಮನಿ ದೇಶದಿಂದ ಬಂದ ವ್ಯಕ್ತಿಯೊಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಇದನ್ನು ಜಿಲ್ಲಾಡಳಿತ ಕೂಡ ಖಚಿತಪಡಿಸಿದೆ.
ಗಂಗಾವತಿ ಸಮೀಪದ ಹಂಪಿ, ಆನೆಗೊಂದಿ, ಅಂಜನಾದ್ರಿ ಬೆಟ್ಟ ಸೇರಿದಂತೆ ಪ್ರವಾಸೋದ್ಯಮ ಸ್ಥಳಗಳನ್ನು ವೀಕ್ಷಣೆ ಮಾಡಲು ಬಂದಿದ್ದ ಆ ವ್ಯಕ್ತಿ ವಿಜಯನಗರ ಜಿಲ್ಲೆ ಮೂಲಕ ಕೊಪ್ಪಳ ಜಿಲ್ಲೆ ಪ್ರವೇಶಿಸಿದ್ದರು. ಕಮಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಟಿಜನ್ ರ್‍ಯಾಪಿಡ್ ಪರೀಕ್ಷೆಗೆ ಒಳಗಾದಾಗ ಸೋಂಕು ಇರುವುದು ಖಚಿತವಾಗಿದೆ. ಆ ವ್ಯಕ್ತಿ ಜೊತೆ ಆವರ ಗೆಳೆತಿಯೂ ಬಂದಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಆನೆಗೊಂದಿ ಆಸ್ಪತ್ರೆ ಸಿಬ್ಬಂದಿಯೊಬ್ಬರು ಹೇಳಿದರು.
ಸಾಣಾಪುರದ ರೆಸಾರ್ಟ್‌ನಲ್ಲಿ ನೆಲೆಸಿದ್ದರಿಂದ ಅಲ್ಲಿಯೇ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ ಭಾಗದಲ್ಲಿ ಸಾಕಷ್ಟು ರೆಸಾರ್ಟ್‌ಗಳಲ್ಲಿ ವಿದೇಶ ಪ್ರಜೆಗಳು ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.