ಗಂಗಾವತಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಸೈಕಲ್ ಜಾಥಾ ಆರಂಭಿಸಿರುವ ವಿಜಯಪುರ ಜಿಲ್ಲೆ ಬಾಗೇವಾಡಿ ತಾಲ್ಲೂಕಿನ ತಾಳೇವಾಡ ಗ್ರಾಮದ ಯುವಕ ಸುರೇಶ ಅವರು ಮಂಗಳವಾರ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.
ವಿಜಯಪುರ ಜಿಲ್ಲೆಯಿಂದ ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆಗೆ ತೆರಳಲು ಸೈಕಲ್ ಜಾಥಾ ನಡೆಸಿರುವ ಯುವಕ ಸುರೇಶ ಕೊಪ್ಪಳ ಜಿಲ್ಲೆಯ ರಸ್ತೆ ಮಾರ್ಗವಾಗಿ ಅಂಜನಾದ್ರಿಗೆ ಬಂದಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಸನ್ಮಾನ ಮಾಡಿ, ಮುಂದಿನ ಮಾರ್ಗಕ್ಕೆ ಪಯಣ ಬೆಳಸಲು ಅನುವು ಮಾಡಿಕೊಟ್ಟರು.
ಯುವಕ ಸುರೇಶ ಅವರು ಅಯೋಧ್ಯೆ ರಸ್ತೆಯುದ್ದಕ್ಕೂ ಪ್ರತಿ ಗ್ರಾಮದಲ್ಲಿ ಆಂಜನೇಯನ ಭಾವಚಿತ್ರ ಬಿಡಿಸುತ್ತಾ ತೆರಳುತ್ತಾರೆ ಎಂದು ಹಿಂದೂಪರ ಸಂಘಟನೆಗಳು ಮುಖಂಡರು ಹೇಳಿದರು.
ಈ ವೇಳೆ ಶಿವಕುಮಾರ ಅರಿಕೇರಿ, ಮದನ್, ಅನುಶಿಲ್ಪಿ ಸೇರಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.