ಕಾರಟಗಿ: ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ ಹೊಡೆದು, ಟ್ರ್ಯಾಕ್ಟರ್‌ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಿದ್ದಲಿಂಗನಗರದ (ಸಾಕ್ಷಿ ರೈಸ್ ಮಿಲ್) ಬಳಿ ಶನಿವಾರ ಜರುಗಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಹಂಚಿನಾಳಕ್ಯಾಂಪ್ ನಿವಾಸಿಗಳಾದ ರಾಘವೇಂದ್ರ (ಟ್ರ್ಯಾಕ್ಟರ್ ಚಾಲಕ) (28), ಟ್ರ್ಯಾಲಿಯಲ್ಲಿದ್ದ ಶೇಕ್ಷಾವಲಿ (21) ಮೃತಪಟ್ಟವರು.
ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಪಕ್ಕದ ಜಮೀನಿನಲ್ಲಿ ಬಿದ್ದಿದ್ದು, ಲಾರಿ ಟ್ರ್ಯಾಕ್ಟರ್ ಮೇಲೆ ಉರುಳಿಬಿದ್ದಿದೆ. ಘಟನಾ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿದರು. ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.