ADVERTISEMENT

ಕುಕನೂರು: ಆದರ್ಶ ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 6:30 IST
Last Updated 10 ಸೆಪ್ಟೆಂಬರ್ 2025, 6:30 IST
ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕುಕುನೂರು ತಾಲ್ಲೂಕಿನ ಇಟಗಿ ಗ್ರಾಮದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು
ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕುಕುನೂರು ತಾಲ್ಲೂಕಿನ ಇಟಗಿ ಗ್ರಾಮದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು   

ಕುಕನೂರು: ತಾಲ್ಲೂಕಿನ ಇಟಗಿ ಗ್ರಾಮದ ಆದರ್ಶ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈಚೆಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಮಾಡಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲೆಯ ವಿದ್ಯಾರ್ಥಿಗಳು ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ, ವಿದ್ಯಾರ್ಥಿನಿ ಅನಿತಾ 3,000 ಮೀಟರ್ ಓಟ ದ್ವಿತೀಯ, ಪ್ರತಿಕ್ಷ 800 ಮೀಟರ್ ಓಟ ದ್ವಿತೀಯ, ಸಂಗೀತಾ ಎಂ. 100 ಮೀಟರ್ ಓಟದಲ್ಲಿ ಪ್ರಥಮ, ಅನಿತಾ ಎಂ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ, ಕೀರ್ತಿ ಕೊಳಜಿ ಬಲ್ಲೆ ಎಸೆತದಲ್ಲಿ ಪ್ರಥಮ, ಕೀರ್ತಿ ತೊಂಡಿಹಾಳ 100 ಮೀಟರ್ ಹರ್ಡಲ್ಸ್, ತ್ರಿವಿಧ ಜಿಗಿತದಲ್ಲಿ ದ್ವಿತೀಯ, ಜ್ಯೋತಿ ಮಡ್ಡಿ ಗುಂಡು ಎಸೆತದಲ್ಲಿ ದ್ವಿತೀಯ, ಭೂಮಿಕಾ ಜೆ.ಸಿ ಸರಪಳಿ ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಚೇತನ್ ಹತ್ತಿಕಟಗಿ ಎಂಬ ವಿದ್ಯಾರ್ಥಿ ಉದ್ದ ಜಿಗಿತ, ತ್ರಿವಿಧ ಜಿಗಿತ, 100×10 ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ವೀರಾಗ್ರಣಿ ಪಡೆದುಕೊಂಡಿದ್ದಾನೆ. 4×100 ರಿಲೇಯಲ್ಲಿ ಪ್ರಥಮ, ಸುಮನ್ ಗುಂಡು ಎಸೆತ, ಸರಪಳಿ ಎಸೆತದಲ್ಲಿ ಪ್ರಥಮ ಸ್ಥಾನ, ಶಿವಕುಮಾರ್ 100 ಮೀ ಓಟದಲ್ಲಿ ಪ್ರಥಮ, ಪ್ರದೀಪ್ 200 ಮೀಟರ್‌ ಓಟದಲ್ಲಿ ದ್ವಿತೀಯ, ಅಲ್ಲಾನ 5,000 ಮೀಟರ್ ವಾಕ್‌ನಲ್ಲಿ ಪ್ರಥಮ ಸ್ಥಾನ, ಮನೋಜ್ ಎತ್ತರ ಜಿಗಿತ ಪ್ರಥಮ ಸ್ಥಾನ, ಪ್ರದೀಪ್ ಕಾರಬಾರಿ 400 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ADVERTISEMENT

ಪ್ರಾಥಮಿಕ ವಿಭಾಗದಲ್ಲಿ: ಬಾಲಕರ ಕಬಡ್ಡಿ ಪ್ರಥಮ ಸ್ಥಾನ, ಬಾಲಕರ ಥ್ರೋಬಾಲ್‌ ಪ್ರಥಮ ಸ್ಥಾನ, ಬಾಲಕಿಯರ ಥ್ರೋಬಾಲ್‌ ಪ್ರಥಮ ಸ್ಥಾನ, ದಿಲೀಪ್ ಚಕ್ರ ಎಸೆತದಲ್ಲಿ ಪ್ರಥಮ, ವೀಣಾ ಉದ್ದ ಜಿಗಿತದಲ್ಲಿ ಪ್ರಥಮ, ಹರೀಶ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.

ಸಾಧನೆ ಮಾಡಿ ವಿದ್ಯಾರ್ಥಿಗಳು ಹಾಗೂ ತರಬೇತಿಗೈದ ದೈಹಿಕ ಶಿಕ್ಷಣ ಶಿಕ್ಷಕಿ ಬಸಮ್ಮ ಮೇಟಿ ಅವರಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ  ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.