ADVERTISEMENT

ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 14:03 IST
Last Updated 18 ಏಪ್ರಿಲ್ 2025, 14:03 IST
ಹನುಮಸಾಗರದ ಎಸ್‌ಸಿ ಕಾಲೊನಿಯಲ್ಲಿರುವ ಮಂಗಳದೇವಿಯ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ನೆರವೇರಿತು
ಹನುಮಸಾಗರದ ಎಸ್‌ಸಿ ಕಾಲೊನಿಯಲ್ಲಿರುವ ಮಂಗಳದೇವಿಯ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ನೆರವೇರಿತು    

ಹನುಮಸಾಗರ: ಗ್ರಾಮದ ಎಸ್‌ಸಿ ಕಾಲೊನಿಯಲ್ಲಿರುವ ಮಂಗಳಾದೇವಿ, ದುರ್ಗಾದೇವಿ ಹಾಗೂ ಕೆಂಚಮ್ಮ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ಧಾರ್ಮಿಕ ಕಾರ್ಯಕ್ರಮದೊಂದಿಗೆ ನೆರವೇರಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುತ್ತೈದೆಯರು ಕಳಸ ಹಿಡಿದು ಮಂಗಳಾದೇವಿ ಹಾಗೂ ದುರ್ಗಾದೇವಿ ಉಚ್ಚಯ್ಯ ಜೊತೆಯಲ್ಲಿ ಸಾಗಿದರು. ನಂತರ ಶ್ರೀದೇವಿಯ ದೇಗುಲ ತಲುಪಿತು. ಇದಕ್ಕೂ ಮೊದಲನೇ ದಿನ ಸಂಜೆ ಉಚ್ಚಯ್ಯ ಎಳೆಯಲಾಗಿತ್ತು.

ಸಮಾಜದ ಮುಖಂಡರಾದ ನೀಲಕಂಠಪ್ಪ ಪೂಜಾರ, ರಜಿನಿಕಾಂತ್ ಸಂದಿಮನಿ, ನೀಲಪ್ಪ ಕುದರಿ, ಹನುಮಂತ ಪೂಜಾರ, ಸೋಮಪ್ಪ ಹೊಸಮನಿ, ದುರಗಪ್ಪ ಇಲಕಲ್, ಚಂದ್ರು ಹಿರೇಮನಿ, ಚಂದಪ್ಪ ಗುಡಗಲದಿನ್ನಿ, ಮಂಗಳೇಶ ಗುಮಗೇರಿ, ಹನುಮಂತ ಹಾದಿಮನಿ, ಶೇಖಪ್ಪ ಸಂದಿಮನಿ, ಮಂಗಳೇಶ ಹಿರೇಮನಿ, ಸುಭಾಷ ಗುಮಗೇರಿ, ಶ್ರೀನಿವಾಸ ಇಲಕಲ್, ಹುಸೇನಪ್ಪ ಇಳಕಲ್, ಪರಶುರಾಮ ಗುಡಿಮನಿ, ಶಿವಾನಂದ ಪೂಜಾರ, ಚಂದ್ರಶೇಖರ ಪೂಜಾರ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT