ADVERTISEMENT

ಹದಿಹರೆಯದವರ ಜಾಗೃತಿ ಶಿಕ್ಷಣ ಶಿಬಿರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 4:17 IST
Last Updated 28 ನವೆಂಬರ್ 2022, 4:17 IST
ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಹದಿಹರೆಯದ ಜಾಗೃತಿ ಶಿಕ್ಷಣ ಶಿಬಿರ ಕಾರ್ಯಕ್ರಮದಲ್ಲಿ ವೈದ್ಯೆ ವಿಜಯಶ್ರೀ ನೀರಾವರಿ ಅವರನ್ನು ಸನ್ಮಾನಿಸಲಾಯಿತು
ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಹದಿಹರೆಯದ ಜಾಗೃತಿ ಶಿಕ್ಷಣ ಶಿಬಿರ ಕಾರ್ಯಕ್ರಮದಲ್ಲಿ ವೈದ್ಯೆ ವಿಜಯಶ್ರೀ ನೀರಾವರಿ ಅವರನ್ನು ಸನ್ಮಾನಿಸಲಾಯಿತು   

ಕೊಪ್ಪಳ: ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಇಲ್ಲಿನ ಗವಿಸಿದ್ದೇಶ್ವರ ಬಾಲಕಿಯರ ವಸತಿ ನಿಲಯದಲ್ಲಿ ಇತ್ತೀಚೆಗೆ ಹದಿಹರೆಯದ ಜಾಗೃತಿ ಶಿಕ್ಷಣ ಶಿಬಿರ ನಡೆಯಿತು.

ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕಿ ಡಾ.ವಿಜಯಶ್ರೀ ನೀರಾವರಿ ಅವರು ಮಕ್ಕಳ ಹಾಗೂ ಹದಿಹರೆಯದ ಆರೋಗ್ಯ ಸಮಸ್ಯೆ, ಸವಾಲುಗಳು, ಮುಟ್ಟಿನ ಸಮಯದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು, ಶುಚಿತ್ವ ಮತ್ತು ರಕ್ತಹೀನತೆ ಕುರಿತು ಉಪನ್ಯಾಸ ನೀಡಿದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸಾವಿತ್ರಿ ಮುಜುಮದಾರ ಮಕ್ಕಳು, ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣ
ಕುರಿತು ಮಾತನಾಡಿದರು.

ADVERTISEMENT

ಕದಳಿ ವೇದಿಕೆ ಅಧ್ಯಕ್ಷೆ ನಿರ್ಮಲಾ ಬಳ್ಳೊಳ್ಳಿ, ಶಿಕ್ಷಕಿ ಅರುಣಾ ನರೇಂದ್ರ, ಶ್ರೀದೇವಿ, ಸುಮಂಗಲಾ ಸೋಮಲಾಪುರ, ವಿಜಯಾ ಬಳ್ಳೊಳ್ಳಿ, ಸುಮಂಗಲಾ ಹಂಚಿನಾಳ, ಶಿಲ್ಪಾ, ರೇಣುಕಾ ಸುರ್ವೆ, ಪಾರ್ವತಿ, ಹೇಮಾ ಹಾಗೂ ಸದಸ್ಯರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.