ADVERTISEMENT

ಬೆಳೆ ವಿಮಾ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 11:21 IST
Last Updated 6 ಜೂನ್ 2020, 11:21 IST
ಕುಕನೂರಿನಲ್ಲಿ ಶನಿವಾರ ರೈತ ಸೇನಾ ಕರ್ನಾಟಕ ನೇತೃತ್ವದಲ್ಲಿ ರೈತರು  ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು
ಕುಕನೂರಿನಲ್ಲಿ ಶನಿವಾರ ರೈತ ಸೇನಾ ಕರ್ನಾಟಕ ನೇತೃತ್ವದಲ್ಲಿ ರೈತರು  ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು   

ಕುಕನೂರು: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾನಿಯಾದ ಬೆಳೆಗೆ ವಿಮಾ ಪರಿಹಾರಕ್ಕಾಗಿ ಆಗ್ರಹಿಸಿ, ರೈತ ಸೇನಾ ಕರ್ನಾಟಕ ತಾಲ್ಲೂಕು ಘಟಕದ ನೇತೃತ್ವದಲ್ಲಿ ರೈತರು ಶನಿವಾರ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸೇನಾ ಕರ್ನಾಟಕ ಜಿಲ್ಲಾ ಮುಖಂಡ ಬಸವರಾಜರಡ್ಡಿ ಬಿಡನಾಳ ಮಾತನಾಡಿ, 2019-20ನೇ ಸಾಲಿನಲ್ಲಿ ಪಾವತಿಯಾಗಬೇಕಾದ ಮುಂಗಾರು ವಿಮಾ ಪರಿಹಾರ ಇನ್ನುವರಿಗೂ ರೈತರ ಖಾತೆಗಳಿಗೆ ಜಮೆಯಾಗಿಲ್ಲ. ಕಳೆದ ಮುಂಗಾರು ಋತುವಿನಲ್ಲಿ ಬೆಳೆಗಳೆಲ್ಲ ಹಾನಿಗೆ ಒಳಗಾಗಿ ರೈತನ ಸಾಲದ ಹೊರೆ ಹೆಚ್ಚುತ್ತಾ ಇದೆ. ಅಲ್ಲದೇ ಈ ಕೊರೊನಾ ಹಾವಳಿಯಿಂದ ಪ್ರಸ್ತುತ ರೈತನ ಸ್ಥೀತಿ ಚಿಂತಾಜನಕವಾಗಿದೆ. ಆದ್ದರಿಂದ ಬೆಳೆ ವಿಮೆ ಪರಿಹಾರ ತಕ್ಷಣ ಜಮಾ ಮಾಡಬೇಕೆಂದು ತಹಿಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಆಗ್ರಹಿಸಿದರು.

ವೀರಯ್ಯ ಶಿರೂರಮಠ, ಹೊನ್ನಪ್ಪ ಮರಡಿ, ಬಸವರಾಜ ಮೇಟಿ, ಈರಣ್ಣ ಬೆಣಕಲ್, ಶರಣಪ್ಪ ಮಾಸೂರು, ಈರಪ್ಪ ಗಿರಡ್ಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.