ADVERTISEMENT

ಹವ್ಯಾಸಿ ಛಾಯಾಚಿತ್ರಗ್ರಾಹಕ ಹನುಮಂತುಗೆ ಕಂಚಿನ ಪದಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:52 IST
Last Updated 10 ಫೆಬ್ರುವರಿ 2026, 6:52 IST
ಮುನಿರಾಬಾದ್ ಸಮೀಪ ಬಂಡಿ ಹರ್ಲಾಪುರ ಗ್ರಾಮದ ಹನುಮಂತ ಹರ್ಲಾಪುರ ಅವರು ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದರು
ಮುನಿರಾಬಾದ್ ಸಮೀಪ ಬಂಡಿ ಹರ್ಲಾಪುರ ಗ್ರಾಮದ ಹನುಮಂತ ಹರ್ಲಾಪುರ ಅವರು ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದರು   

ಮುನಿರಾಬಾದ್: ಸಮೀಪದ ಬಂಡಿ ಹರ್ಲಾಪುರ ಗ್ರಾಮದ ಹವ್ಯಾಸಿ ಛಾಯಾಚಿತ್ರಗ್ರಾಹಕ ಹನುಮಂತ ಹರ್ಲಾಪುರ ಅವರಿಗೆ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಲಭಿಸಿದೆ.

ಹೈದರಾಬಾದ್ ಮೂಲದ ‘ಸಿಗ್ಮಾ ಅಕಾಡೆಮಿ ಆಫ್ ಫೋಟೋಗ್ರಫಿ ಸಂಸ್ಥೆ’ ಭಾನುವಾರ ನಡೆಸಿದ ‘ಇಂಡಿಯನ್ ವೆಡ್ಡಿಂಗ್ ಫೋಟೋಗ್ರಾಫಿ ಫೆಸ್ಟಿವಲ್ 2026’ ವಿಭಾಗದಲ್ಲಿ ಇವರು ಪ್ರದರ್ಶಿಸಿದ ಮದುವೆ ಸಂದರ್ಭದ ಒಂದು ಚಿತ್ರವು ಪದಕದ ಜೊತೆಗೆ ನಗದು ಬಹುಮಾನವನ್ನು ಗಳಿಸಿದೆ. ಪ್ರದರ್ಶನದ ಕೊನೆಯಲ್ಲಿ ಬಹುಮಾನ ವಿತರಣೆ ನಡೆಯಿತು.