ADVERTISEMENT

ಬಿಎಸ್ಎಫ್ ಹುದ್ದೆಗೆ ಹೊಸಳ್ಳಿ ಯುವತಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 13:49 IST
Last Updated 21 ಸೆಪ್ಟೆಂಬರ್ 2023, 13:49 IST
ಅಂಬಿಕಾ
ಅಂಬಿಕಾ   

ಗಂಗಾವತಿ: 2022ರ ಸ್ಟಾಫ್ ಸೆಲೆಕ್ಷನ್ ಕಮಿಟಿ ಪರೀಕ್ಷೆಯಲ್ಲಿ ಭತ್ತದ ನಾಡಿನ ಯುವತಿ ಅಂಬಿಕಾ ಮೊದಲ ಪ್ರಯತ್ನದಲ್ಲೆ ಬಿಎಸ್‌ಎಫ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್‌ ತಿಂಗಳಿನಿಂದ 11 ತಿಂಗಳು ತರಬೇತಿಗೆ ಪಶ್ಚಿಮ ಬಂಗಾಳಕ್ಕೆ  26 ತೆರಳಿಲಿದ್ದಾರೆ.

ಅಂಬಿಕಾ ಮೂಲತಃ ಗಂಗಾವತಿ ತಾಲ್ಲೂಕಿನ ಹೊಸಳ್ಳಿ ಗ್ರಾಮದವರು. ತಂದೆ ವೆಂಕಟೇಶ, ತಾಯಿ ಶಾಂತಮ್ಮ.  ಇವರ ತಂದೆ ಕಬ್ಬಿನ ಜ್ಯೂಸಿನ ಬಂಡಿಹಾಕಿ, ಅದರಿಂದ ಬರುವ ಆದಾಯದಲ್ಲೆ ಕುಟುಂಬ ನಿರ್ವಹಣೆ ಜತಗೆ ಅಂಬಿಕಾ ಅವರನ್ನು ಓದಿಸಿದ್ದಾರೆ. ಮಗಳು ಬಿಎಸ್‌ಎಫ್‌ಗೆ ಆಯ್ಕೆಯಾಗಿರುವುದಕ್ಕೆ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT