ADVERTISEMENT

ಗ್ರಾಮೀಣ ಕ್ರೀಡಾ ಉತ್ಸವ: ಸಾಹಸದಾಟದ ಮೆರಗು

ಆನೆಗೊಂದಿ ಉತ್ಸವ ಜ. 9, 10ರಂದು: ಮಹಿಳಾ ಕುಸ್ತಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 19:45 IST
Last Updated 11 ಡಿಸೆಂಬರ್ 2019, 19:45 IST
ಆನೆಗೊಂದಿ ಉತ್ಸವದ ಲೋಗೋ
ಆನೆಗೊಂದಿ ಉತ್ಸವದ ಲೋಗೋ   

ಕೊಪ್ಪಳ:ಜಿಲ್ಲಾಡಳಿತದ ವತಿಯಿಂದ ಜ.9, 10 ರಂದು ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.

ಜ.3 ರಿಂದ 9 ರವರೆಗೆ ವಿವಿಧ ಕ್ರೀಡೆ, ಸಾಂಪ್ರದಾಯಿಕ ಸಾಹಸ ಕ್ರೀಡೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು.ಮಹಿಳಾ ಮತ್ತು ಪುರುಷ ಕುಸ್ತಿಯಲ್ಲಿಆನೆಗೊಂದಿ ಕುಮಾರ, ಕೇಸರಿ ಹಾಗೂ ಕುಮಾರಿ, ಕಿಶೋರಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಉತ್ಸವದ ಪ್ರಚಾರಾಂದೋಲನ ಪ್ರಾರಂಭೋತ್ಸವ ಅಂಗವಾಗಿಶ್ರೀ ಚನ್ನಬಸವೇಶ್ವರ ತಾಲ್ಲೂಕು ಕ್ರೀಡಾಂಗಣದಲ್ಲಿ ನೊಪಸನಾ ತಂಡದಿಂದ ಬೈಕ್ ಸ್ಟಂಟ್ ಹಾಗೂ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದೆ. ಅದೇ ದಿನ ಶಿಲ್ಪಕಲಾ, ಛಾಯಾಚಿತ್ರ ಸ್ಪರ್ಧೆಯನ್ನು ಆನೆಗೊಂದಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ಗ್ರಾಮೀಣ ಕ್ರೀಡಾ ಉತ್ಸವ: ಪುರುಷ ಹಾಗೂ ಮಹಿಳೆಯರಿಗೆ ಗ್ರಾಮೀಣ ಕ್ರೀಡಾ ಉತ್ಸವದ ಅಂಗವಾಗಿ ಕೆಸರು ಗದ್ದೆ ಹಗ್ಗ ಜಗ್ಗಾಟ, ಗದ್ದೆ ಓಟ, ಮಲ್ಲಕಂಬ ಪ್ರದರ್ಶನ, ಕುಸ್ತಿ, ಪುರುಷರಿಗೆ ಕಬಡ್ಡಿ, ಮಹಿಳೆಯರಿಗೆ ವಾಲಿಬಾಲ್, ಅಲ್ಲದೇ ಸ್ಲೋ ಸೈಕಲ್ ರೇಸ್, ಕಲ್ಲುಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು ಮತ್ತು ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ.

ಸಂಪ್ರದಾಯಿಕ ಸ್ಪರ್ಧೆ:ಸಾಂಪ್ರದಾಯಿಕ ಸ್ಪರ್ಧೆಗಳಲ್ಲಿ ರಂಗೋಲಿ (ಮಹಿಳೆ), ತಳಿರುತೋರಣ ಅಲಂಕಾರ (ಆನೆಗೊಂದಿ ವಾರ್ಡವಾರು), ಚಿತ್ರಕಲಾ, ಪಗಡೆಯಾಟ, ಅಡುಗೆ ರಾಣಿ ಕಾರ್ಯಕ್ರಮದಡಿ ಎರಡು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜಯನಗರ ಕಾಲದ ಪಾರಂಪರಿಕ ಹಾಗೂ ಸ್ಥಳೀಯ ಅಡುಗೆ ಹಮ್ಮಿಕೊಳ್ಳಲಾಗಿದೆ

ಭೂ ಸಾಹಸ ಕ್ರೀಡೆಯಲ್ಲಿ ಟ್ರೆಕ್ಕಿಂಗ್, ರಾಕ್ ಕ್ಲೈಬಿಂಗ್, ಲ್ಯಾಡರ್ ಕ್ಲೈಬಿಂಗ್, ಟಾರ್ಗೆಟ್ ಶೂಟಿಂಗ್, ಝಿಪ್‌ಲೈನ್, ಅಬ್‌ಸ್ಟಾಕಲ್ಸ್, ರ‍್ಯಾಫೆಲಿಂಗ್, ಸ್ಪೋಟ್ಸ್ ಕ್ಲೈಬಿಂಗ್, ರೋಪ್ ಕ್ಲೈಬಿಂಗ್,ಅಲ್ಪೈನ್ ನೆಟ್ ಕ್ರೀಡೆ ನಡೆಯಲಿವೆ.

ಜಲ ಸಾಹಸ ಕ್ರೀಡೆಗಳಲ್ಲಿ ಬೋಟಿಂಗ್, ಸರ್ಫ್ ಮಾಡ್ಯೂಲ್, ಕಯಾಕಿಂಗ್, ವಾಟರ್ ಸರ್ಫಿಂಗ್, ರೋಯಿಂಗ್, ಕೆನೊಯಿಂಗ್, ಮೋಟಾರ್ ಬೋಟ್ ರೈಡ್, ಬನಾನಾ ರೈಡ್ ಹಾಗೂ ವಾಟರ್ ಸ್ಕೂಟರ್ ಸ್ಪರ್ಧೆ ಜರುಗಲಿದೆ.

ಮ್ಯಾರಾಥಾನ್:ಪುರುಷರಿಗೆ 12 ಕಿ.ಮೀ ಹಾಗೂ ಮಹಿಳೆಯರಿಗೆ 6 ಕಿ.ಮೀ. ಮ್ಯಾರಾಥಾನ್, ಅಂಗವಿಕಲ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವೀಲ್ ಚೇರ್ ಸ್ಪರ್ಧೆ ಮತ್ತು ವಿಶೇಷ ಕ್ರೀಡೆಗಳಲ್ಲಿ ಬೈಕ್ ಸ್ಟಂಟ್, ಹೆರಿಟೇಜ್ ವಾಕ್, ಸೈಕಲ್ ಜಾಥಾ ಹಾಗೂ ಗಾಳಿಪಟ ಪ್ರದರ್ಶನ ನಡೆಯಲಿದೆ. ಉತ್ಸವದ ನಿಮಿತ್ತ ನಡೆಯಲಿರುವ ವಿವಿಧ ಸ್ಪರ್ಧೆಗಳು ಹಾಗೂ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾ ಆಸಕ್ತರು, ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನೋಂದಣಿ: ಜಲಸಾಹಸ, ಭೂಸಾಹಸ ಹಾಗೂ ವಿಶೇಷ ಕ್ರೀಡೆಗಳಿಗೆ ಸಂಬಂಧಿಸಿದಂತೆಪೊಲೀಸ್ ಇಲಾಖೆಯ ಜಿಲ್ಲಾ ಉಪಾಧೀಕ್ಷ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಮೊ-8197058425, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೊ- 9731042063, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೊ- 9686397868, ಗಂಗಾವತಿ ತಾಲ್ಲೂಕು ಕ್ರೀಡಾಧಿಕಾರಿ ಮೊ- 7411755523 ಹಾಗೂ ನೊಪಾಸನಾ ತಂಡ ಮೊ- 9845145046 ಮತ್ತು ಯುವ ಸ್ಪಂದನಾ ತಂಡ ಮೊ- 9535993848 ಕ್ಕೆ ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.