
ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟವನ್ನು ಬಾಗಲಕೋಟೆ ಜಿಲ್ಲೆಯ ಹನುಗುಂದ ತಾಲ್ಲೂಕಿನ ಬಿಸಲದಿನ್ನಿ ಗ್ರಾಮದ ಶಂಕರ್ ಬಸಪ್ಪ ಕುರಿ (22) ಅವರು 115 ಕೆ.ಜಿ ಭಾರದ ಜೋಳದ ಚೀಲ ಹೊತ್ತು ಗುರುವಾರ ಏರಿದರು.
ಅಂಜನಾದ್ರಿ ಬೆಟ್ಟದ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಜೋಳದ ಚೀಲ ಇಳಿಸದೆ, ಜೈಶ್ರೀರಾಮ ಘೋಷಣೆ ಕೂಗುತ್ತಾ, ಬೆಟ್ಟ ಏರಿದ್ದಾನೆ. ನಂತರ ಜೋಳದ ಚೀಲ ದೇವರಿಗೆ ಸಮರ್ಪಿಸಿ, ಸ್ನೇಹಿತರೊಂದಿಗೆ ಆಂಜನೇಯನ ದರ್ಶನ ಪಡೆದರು.
ನಂತರ ಮಾತನಾಡಿದ ಶಂಕರ್, ಮನೆ ಮತ್ತು ವೈಯಕ್ತಿಕ ಸಮಸ್ಯೆಗಳು ನಿವಾರಣೆಯಾದರೇ 115ಕೆಜಿ ಜೋಳದ ಚೀಲ ಹೊತ್ತು ಅಂಜನೇಯನ ದರ್ಶನ ಪಡೆಯುತ್ತೇನೆ ಎಂದು ಹರಕೆ ಹೊತ್ತಿದ್ದೆ. ಹಾಗಾಗಿ ಭಕ್ತಿಯಿಂದ ಜೋಳದ ಚೀಲ ಹೊತ್ತು, ದೇವರಿಗೆ ಸಮರ್ಪಿಸಿದ್ದೇನೆ’ ಎಂದರು.
ಮಲ್ಲು, ವೆಂಕಟೇಶ, ಬಾಲಾಜಿ, ಅನಂದ, ಮಹ್ಮದ್ ಕೈಫ್, ಅಭಿ, ಶಿವು, ಸಂಗು, ನಾಗು, ಯಮನಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.