ADVERTISEMENT

ಅಂಜನಾದ್ರಿ ಹುಂಡಿ ಎಣಿಕೆ: ₹27.16 ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 14:13 IST
Last Updated 3 ನವೆಂಬರ್ 2023, 14:13 IST
   

ಗಂಗಾವತಿ: ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಶುಕ್ರವಾರ ನಡೆಯಿತು.

ತಹಶೀಲ್ದಾರ ಮಂಜುನಾಥ ನೇತೃತ್ವದಲ್ಲಿ  ದೇವಸ್ಥಾನ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಅದರಲ್ಲಿ ₹27, 16,086 (ಸೆ.21 ರಿಂದ ನ.3ರವರೆಗೆ) ಹಣ ಸಂಗ್ರಹವಾಗಿದೆ. ಇದರಲ್ಲಿ ಒಂದು ವಿದೇಶಿ ನೋಟು (ಯುಎಸ್ಎ), ಎಂಟು ವಿದೇಶಿ ನಾಣ್ಯಗಳು ಸಂಗ್ರಹವಾಗಿವೆ. ಹುಂಡಿ ಎಣಿಕೆ ಕಾರ್ಯವು ಸಂಪೂರ್ಣ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಿತು.

ಕಳೆದ ಬಾರಿ (ಸೆ.21) ಹುಂಡಿ ಎಣಿಕೆ ಸಂದರ್ಭದಲ್ಲಿ ₹ 31,77,385 ಸಂಗ್ರಹವಾಗಿತ್ತು.

ADVERTISEMENT

ಗ್ರೇಡ್-2 ತಹಶೀಲ್ದಾರ್‌ ಮಹಾಂತಗೌಡ, ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಹೇಶ್ ದಲಾಲ, ಮಂಜುನಾಥ ಹಿರೇಮಠ, ತಹಶೀಲ್ದಾರ್‌ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಇಂದಿರಾ, ಮಂಜುನಾಥ, ಸುಧಾ, ಕವಿತಾ, ಪೂ ಜಾ ಸಾಣಾಪುರದ ಪಿಕೆಜಿಬಿ ಬ್ಯಾಂಕ್ ಸಿಬ್ಬಂದಿ ರಾಜಶೇಖರ, ಸುನೀಲ್, ಪ್ರವಾಸಿ ಮಿತ್ರ ಹನುಮಂತಪ್ಪ, ಬೇನಾಳಪ್ಪ ಸೇರಿ ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ ಇದ್ದರು.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಶುಕ್ರವಾರ ತಹಶೀಲ್ದಾರ್‌ ಮಂಜುನಾಥ ನೇತೃತ್ವದಲ್ಲಿ ಹುಂಡಿಹಣ ಎಣಿಕೆ ಮಾಡಲಾಯಿತು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಶುಕ್ರವಾರ ತಹಶೀಲ್ದಾರ್‌ ಮಂಜುನಾಥ ನೇತೃತ್ವದಲ್ಲಿ ಹುಂಡಿಹಣ ಎಣಿಕೆ ಮಾಡಲಾಯಿತು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಶುಕ್ರವಾರ ತಹಶೀಲ್ದಾರ್‌ ಮಂಜುನಾಥ ನೇತೃತ್ವದಲ್ಲಿ ಹುಂಡಿಹಣ ಎಣಿಕೆ ಮಾಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.