ADVERTISEMENT

ಹುಂಡಿ ಎಣಿಕೆ : ₹6 ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 4:29 IST
Last Updated 1 ಜೂನ್ 2021, 4:29 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಲಾಯಿತು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಲಾಯಿತು   

ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರದಲ್ಲಿರುವ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಹಣ ಸೋಮವಾರ ಎಣಿಕೆ ಮಾಡಲಾಯಿತು.

ತಹಶೀಲ್ದಾರ್ ಯು.ನಾಗರಾಜ ಮಾತನಾಡಿ,‘ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ದೇವಸ್ಥಾನ ಬಂದ್ ಮಾಡಲಾಗಿದೆ. ಆದರೂ ಹುಂಡಿಯಲ್ಲಿ ಇರುವ ಹಣ ಹಾಳಾಗುವ ಸಾಧ್ಯತೆ ಇದ್ದ ಕಾರಣ ಸೋಮವಾರ ಎಣಿಕೆ ಮಾಡಲಾಯಿತು. ಈ ವೇಳೆ ಹುಂಡಿಯಲ್ಲಿ ಒಟ್ಟು ₹637458 ಸಂಗ್ರಹವಾಗಿದೆ. ಎರಡು ನೇಪಾಳ ದೇಶದ ನಾಣ್ಯಗಳಿವೆ. ಮಾರ್ಚ್ 18 ರಂದು ಹುಂಡಿ ಹಣ ಎಣಿಕೆ ಮಾಡಿದ್ದ ವೇಳೆಯಲ್ಲಿ ₹1542204 ಸಂಗ್ರಹವಾಗಿತ್ತು’ ಎಂದು ತಿಳಿಸಿದರು.

ಕಂದಾಯ ಇಲಾಖೆ ಸಿಬ್ಬಂದಿ ಅನಂತ ಜೋಷಿ, ಮೈಬೂಬ ಅಲಿ, ಮಂಜುನಾಥ ಹಿರೇಮಠ, ಮಹೇಶ ದಲಾಲ್, ಶರಣಪ್ಪ, ಅಭಿಷೇಕ, ವಿರೇಶ, ವೆಂಕಟೇಶ ಸೇರಿ ದೇಗುಲದ ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.