ADVERTISEMENT

ಕೊಪ್ಪಳ: ಎಎಸ್‍ಐ ಸೇರಿ 13 ಜನರಿಗೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 18:52 IST
Last Updated 13 ಜುಲೈ 2020, 18:52 IST
ಯಲಬುರ್ಗಾ ಪಟ್ಟಣದ 15ನೇ ವಾರ್ಡ್‌ನಲ್ಲಿ ಸೋಮವಾರ ರಸ್ತೆಗೆ ಮುಳ್ಳು ಹಾಕಿ ಸೀಲ್‍ಡೌನ್ ಮಾಡಿರುವ ದೃಶ್ಯ
ಯಲಬುರ್ಗಾ ಪಟ್ಟಣದ 15ನೇ ವಾರ್ಡ್‌ನಲ್ಲಿ ಸೋಮವಾರ ರಸ್ತೆಗೆ ಮುಳ್ಳು ಹಾಕಿ ಸೀಲ್‍ಡೌನ್ ಮಾಡಿರುವ ದೃಶ್ಯ   

ಯಲಬುರ್ಗಾ: ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕು ಒಳಗೊಂಡಂತೆ ಒಟ್ಟು 13 ಕೋವಿಡ್ ಪ್ರಕರಣಗಳು ಸೋಮವಾರ ಪತ್ತೆಯಾಗಿವೆ.

ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೆ, ಸೋಮವಾರ ಪಟ್ಟಣದಲ್ಲಿಯೇ ನಾಲ್ಕು ಜನರಿಗೆ ಸೋಂಕು ದೃಢಪಟ್ಟಿದ್ದು ಅವರನ್ನು ಕೊಪ್ಪಳದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಟ್ಟಣದ 15ನೇ ವಾರ್ಡ್‌ನಲ್ಲಿ ಒರ್ವ ಮಹಿಳೆ, 5ನೇ ವಾರ್ಡ್‌ನಲ್ಲಿ ಇಬ್ಬರಿಗೆ ಹಾಗೂ ಸ್ಥಳೀಯ ಎಎಸ್‍ಐ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ADVERTISEMENT

ಹಾಗೆಯೇ ಕುದ್ರಿಕೊಟಗಿ ಮತ್ತು ಕರಮುಡಿ ಗ್ರಾಮದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸೋಂಕಿತರ ವಾಸದ ಪ್ರದೇಶವನ್ನು ಸೀಲ್‍ಡೌನ್ ಮಾಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ತಾಲ್ಲೂಕಿನ ವಿವಿಧ ಗ್ರಾಮದ ಅನೇಕರಿಗೆ ಸೋಂಕು ಪತ್ತೆಯಾಗಿದ್ದು ತಾಲ್ಲೂಕು ಕೇಂದ್ರವನ್ನೆ ಮತ್ತೆ ಕಟ್ಟು ನಿಟ್ಟಿನ ಸೀಲ್‍ಡೌನ್ ಮಾಡಬೇಕೆಂಬ ಒತ್ತಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.