ADVERTISEMENT

ಕುಕನೂರು | ದೂರುದಾರರ ಮೇಲೆ ಹಲ್ಲೆ: ಪಿಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:32 IST
Last Updated 16 ಅಕ್ಟೋಬರ್ 2025, 7:32 IST
<div class="paragraphs"><p>ಅಮಾನತು</p></div>

ಅಮಾನತು

   

ಕುಕನೂರು (ಕೊಪ್ಪಳ ಜಿಲ್ಲೆ): ದೂರು ನೀಡಲು ಬಂದಾತನ ಮೇಲೆಯೇ ಹಲ್ಲೆ ಮಾಡಿದ್ದ ಆರೋಪದಡಿ ಜಿಲ್ಲೆಯ ಕುಕನೂರು ಠಾಣೆಯ ಸಬ್‌ ಇನ್‌ಸ್ಟೆಕ್ಟರ್‌ ಗುರುರಾಜ್‌ ಟಿ. ಅವರನ್ನು ‌ಅಮಾನತು ಮಾಡಲಾಗಿದೆ.

‘ನನ್ನ ಮೇಲೆ ಹಲ್ಲೆ ಮಾಡಿ ಪಿಎಸ್‌ಐ ದೌರ್ಜನ್ಯ ಎಸಗಿದ್ದಾರೆ’ ಎಂದು ಕೊಪ್ಪಳ ತಾಲ್ಲೂಕಿನ ಯಲಮಗೇರಿಯ ಗಾಳೆಪ್ಪ ಹಿರೇಮನಿ ದೂರು ನೀಡಿದ್ದರು.

ADVERTISEMENT

‘ದಲಿತ ಸಮುದಾಯದ ಮುಖಂಡರು ಮಂಗಳವಾರ ತಡರಾತ್ರಿ ತನಕ ಠಾಣೆ ಎದುರು ಪ್ರತಿಭಟಿಸಿದ್ದು, ಪಿಎಸ್‌ಐ ಅಮಾನತು ತನಕ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು.

ಬಳಿಕ ಬಳ್ಳಾರಿ ವಲಯದ ಐಜಿಪಿ ವರ್ತಿಕಾ ಕಟಿಯಾರ್ ಜೊತೆ ದೂರವಾಣಿ ಮೂಲಕ ಚರ್ಚಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಮಾನತು ಆದೇಶ ಹೊರಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.