ADVERTISEMENT

ಹನುಮಸಾಗರದಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 13:41 IST
Last Updated 24 ಡಿಸೆಂಬರ್ 2019, 13:41 IST
ಹನುಮಸಾಗರ ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಈಚೆಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪೂಜೆಯ ಬಳಿಕ ಅಗ್ನಿ ಪ್ರವೇಶ ಮಾಡಿದರು
ಹನುಮಸಾಗರ ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಈಚೆಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪೂಜೆಯ ಬಳಿಕ ಅಗ್ನಿ ಪ್ರವೇಶ ಮಾಡಿದರು   

ಹನುಮಸಾಗರ: ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಈಚೆಗೆ ಅಯ್ಯಪ್ಪಸ್ವಾಮಿಯ ಮಹಾಪೂಜೆ ಮತ್ತು ಅಗ್ನಿ ಪ್ರವೇಶ ಕಾರ್ಯಕ್ರಮ ಜರುಗಿತು.

ಗ್ರಾಮದ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ವಿವಿಧ ಬಗೆಯ ಹೂವುಗಳಿಂದ ಅಯ್ಯಪ್ಪಸ್ವಾಮಿಯ ಭಾವಚಿತ್ರವನ್ನು ಶೃಂಗರಿಸಿ, ಬಾಳೆ ದಿಂಡಿನಿಂದ 18 ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಪೂಜೆಗೂ ಮುಂಚೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸುಡುವ ಎಣ್ಣೆಯಲ್ಲಿ ಕೈ ಅದ್ದಿ, ಅಗ್ನಿ ಪ್ರವೇಶ ಮಾಡಿದರು.

ಬಳಿಕ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗಳನ್ನು ಹಾಡುವ ಮೂಲಕ ವಿವಿಧ ಬಗೆಯ ಪೂಜೆಗಳನ್ನು ಸಲ್ಲಿಸಲಾಯಿತು.

ADVERTISEMENT

ಗುರುಸ್ವಾಮಿ ಓಬಳೇಪ್ಪ ಇಟಗಿ, ಮಾಲಾಧಾರಿಗಳಾದ ಮಹಾಂತೇಶ ತುಗಲಡೋಣಿ, ಯಮನಪ್ಪ ಗ್ವಾತಗಿ, ರವಿ ಹಲಕುರ್ಕಿ, ಫಕೀರಪ್ಪ ಗ್ವಾತಗಿ, ಮಂಜುನಾಥ ಪೂಜಾರ, ಧರ್ಮಪ್ಪ ಪೂಜಾರ, ಮಂಜುನಾಥ ತುಗಲಡೋಣಿ, ಚಂದಪ್ಪ ಗೌಡ್ರ, ನಿಂಗಪ್ಪ ಬಲಕುಂದಿ, ಮರಿಯಪ್ಪ ಗ್ವಾತಗಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಅಯ್ಯಪ್ಪ ಸ್ವಾಮಿ
ಮಾಲಾಧಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.